ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳಾಲ: ದೈತ್ಯಾಕಾರದ ಕಡಲ ಹಂದಿ ಕಳೇಬರ ಪತ್ತೆ

Last Updated 4 ಫೆಬ್ರುವರಿ 2021, 15:26 IST
ಅಕ್ಷರ ಗಾತ್ರ

ಉಳ್ಳಾಲ: ಇಲ್ಲಿನ ಮೊಗವೀರಪಟ್ನ ಸಮುದ್ರ ತೀರದಲ್ಲಿ ದೈತ್ಯಾಕಾರದ ಮೀನಿನ ಕಳೇಬರ ಪತ್ತೆಯಾಗಿದೆ. ತಿಮಿಂಗಿಲವನ್ನು ಹೋಲುತ್ತಿದ್ದರೂ, ಸ್ಥಳೀಯರು ಇದನ್ನು ಕಡಲು ಹಂದಿ (ಪರ್ಪೋಯಿಸ್) ಕಳೇಬರ ಎಂದು ಗುರುತಿಸಿದ್ದಾರೆ.

ಸುಮಾರು 10 ಅಡಿ ಉದ್ದದ, ಟನ್‌ಗಟ್ಟಲೆ ಭಾರ ಹೊಂದಿರುವ ಕಡಲ ಹಂದಿ ಇದಾಗಿದೆ. ಗುರುವಾರ ನಸುಕಿನ ಜಾವ ಮೊಗವೀರಪಟ್ನದ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಈ ದೈತ್ಯಾಕಾರದ ಕಡಲ ಹಂದಿಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಮುದ್ರ ತೀರದಲ್ಲಿ ಜಮಾಯಿಸಿದ್ದರು.

‘ಕಳೇಬರ ಕೊಳೆತ ಸ್ಥಿತಿಯಲ್ಲಿ ಇರಲಿಲ್ಲ. ಮತ್ತೆ ಇದನ್ನು ಹೂಳಲು ಕ್ರೇನಿನ ಅಗತ್ಯವಿದ್ದು, ಸ್ಥಳದಲ್ಲೇ ಬಿಟ್ಟರೆ ಕೊಳೆತು ದುರ್ನಾತ ಬೀರುವ ಸಾಧ್ಯತೆ ಇರುವುದರಿಂದ ಎಲ್ಲರೂ ಸೇರಿ ಮತ್ತೆ ಸಮುದ್ರಕ್ಕೆ ಕಳೇಬರವನ್ನು ದೂಡಿ ಬಿಟ್ಟಿದ್ದೇವೆ’ ಎಂದು ಸ್ಥಳೀಯರು ಹೇಳಿದರು.

ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ವಿಜ್ಞಾನಿಗಳ ತಂಡ ಉಳ್ಳಾಲಕ್ಕೆ ಭೇಟಿ ನೀಡಿ, ಕಳೇಬರಹ ಪರೀಕ್ಷಿಸಿ, ಇದು ಕಡಲ ಹಂದಿಯೇ ಎಂದು ದೃಢಪಡಿಸಲು ಯತ್ನಿಸಿದರೂ, ಅಷ್ಟರಲ್ಲಾಗಲೇ ಸ್ಥಳೀಯರು ಕಳೇಬರವನ್ನು ಸಮುದ್ರಕ್ಕೆ ದೂಡಿ ಬಿಟ್ಟಿದ್ದರಿಂದ ಇದು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT