ಮಳೆಗೆ ಕೋಳಿ ಸಾಕಣೆ ಕೇಂದ್ರ ನೆಲಸಮ 

7

ಮಳೆಗೆ ಕೋಳಿ ಸಾಕಣೆ ಕೇಂದ್ರ ನೆಲಸಮ 

Published:
Updated:
ಕೋಳಿ ಸಾಕಣಾ ಕೇಂದ್ರದ ಕಟ್ಟಡ ನೆಲಸಮಗೊಂಡಿರುವುದು.‌ (ವಿಟ್ಲ ಚಿತ್ರ)

ವಿಟ್ಲ: ಮೂರು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಗೆ  ಪ್ರದೇಶದಲ್ಲಿ ಹಾನಿ ಪ್ರಕರಣ ಮುಂದುವರಿದಿದೆ.

ವಿಟ್ಲ ಕಸಬ ಗ್ರಾಮದ ಮಂಗಲಪದವು ಮಚ್ಚ ನಿವಾಸಿ ಪ್ರಮೀಳ  ಎಂಬುವರ ಮನೆ ಮೇಲೆ ಪಕ್ಕದ ಗುಡ್ಡ ಜರಿದು ಬಿದ್ದು ಮನೆಗೆ ಹಾನಿಯಾಗಿದೆ. ಮನೆಮಂದಿಗೆ ಯಾವುದೇ ಹಾನಿಯಾಗಿಲ್ಲ.  ಪುಣಚ ಗ್ರಾಮದ ಅಗ್ರಳ ನಿವಾಸಿ ರಾಮಣ್ಣ ಗೌಡ ಅವರ ಸುಮಾರು 3 ಸಾವಿರ ಕೋಳಿಗಳಿಗಳು ಇದ್ದ ಸಾಕಣಾ ಕೇಂದ್ರದ ಕಟ್ಟಡದ ಮೇಲೆ ಬರೆ ಜರಿದು ಬಿದ್ದು ಕಟ್ಟಡ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಸಿಮೆಂಟ್ ಕಂಬಗಳು ಮುರಿದು ಮಣ್ಣಿನಲ್ಲಿ ಹೂತು ಹೋಗಿದೆ,. ಚಾವಣಿಯ ಹೆಂಚುಗಳು ಪುಡಿಯಾಗಿದೆ. ₹3.5 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !