ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್ ಪಾವತಿಸದಿದ್ದರೆ ವಿದ್ಯುತ್ ಪೂರೈಕೆ ಸ್ಥಗಿತ: ಮೆಸ್ಕಾಂ ಎಚ್ಚರಿಕೆ

Last Updated 20 ಸೆಪ್ಟೆಂಬರ್ 2020, 2:56 IST
ಅಕ್ಷರ ಗಾತ್ರ

ಮಂಗಳೂರು: ಗ್ರಾಹಕರ ಬಿಲ್ ಪಾವತಿಗೆ ಬಾಕಿ ಇರುವ ಸ್ಥಾವರಗಳ ವಿದ್ಯುತ್ ಪೂರೈಕೆ ಇದೇ 21ರಿಂದ ಸ್ಥಗಿತ ಗೊಳಿಸಲಾಗುವುದು ಎಂದು ಮೆಸ್ಕಾಂ ಎಚ್ಚರಿಕೆ ನೀಡಿದೆ.

ಕೋವಿಡ್-19 ಸಂಕಷ್ಟದಿಂದ ವಿದ್ಯುತ್ ಬಿಲ್ ವಸೂಲಾತಿ ಕುಂಠಿತ ವಾಗಿದೆ. ಅದಕ್ಕಾಗಿ ಬಾಕಿ ಬಿಲ್ ಪಾವತಿ ಸುವಂತೆ ಕೋರಲಾಗಿದೆ. ಗ್ರಾಹಕರಿಂದ ವಸೂಲಾಗುವ ಕಂದಾಯ ಮೊತ್ತದಲ್ಲಿ ವಿದ್ಯುತ್ ಖರೀದಿ ಸೇರಿದಂತೆ ಎಲ್ಲ ವೆಚ್ಚಗಳನ್ನು ಭರಿಸಲಾಗುತ್ತಿದೆ. ಗ್ರಾಹಕರ ಬಿಲ್ ಪಾವತಿ ವಿಳಂಬವಾದಲ್ಲಿ, ವಿದ್ಯುತ್ ಖರೀದಿ ಬಿಲ್‌ ಪಾವತಿಸಲು ಮೆಸ್ಕಾಂಗೆ ಕಷ್ಟವಾಗುತ್ತದೆ. ಇದರಿಂದ ಗ್ರಾಹಕರಿಗೆ ಅಡಚಣೆ ರಹಿತ ವಿದ್ಯುತ್ ಸರಬರಾಜು ಮಾಡಲೂ ಕಷ್ಟವಾಗುತ್ತದೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT