ವಾರ್ಡ್‌ನ ವಿಶೇಷ
ನೂತನ ಜಿಲ್ಲಾ ಕಚೇರಿಗಳ ಸಂಕೀರ್ಣ ‘ಪ್ರಜಾ ಸೌಧ’, ಕಂಕನಾಡಿ ಜಂಕ್ಷನ್ ರೈಲು ನಿಲ್ದಾಣ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಗಳಿರುವ ವಾರ್ಡ್ ಇದು. ವಿಜಯನಗರ, ಪಕ್ಕಲಡ್ಕ, ಧೂಮಲಚ್ಚಿಲ್, ಭಟ್ರ ಗೇಟ್, ಕರ್ಮಾರ್, ಕಳ್ವೆರೆ ಗುರಿ ಮೊದಲಾದ ಪ್ರದೇಶಗಳು ಇಲ್ಲಿವೆ. ಮಹಾಕಾಳಿ ಭಜನಾಮಂದಿರ ಹಾಗೂ ಬಜಾಲ್ ಪಕ್ಕಲಡ್ಕದ ಹೋಲಿ ಸ್ಪಿರಿಟ್ ಚರ್ಚ್, ವಿಜಯನಗರದ ಮಸೀದಿ ಇಲ್ಲಿರುವ ಪ್ರಮುಖ ಧಾರ್ಮಿಕ ಕೇಂದ್ರಗಳು. ಐದು ಅಂಗನವಾಡಿಗಳು, ಬಜಾಲ್‌ನಲ್ಲಿ ಕಳ್ವೆರೆಗುರಿಯಲ್ಲಿ ಸರ್ಕಾರಿ ಶಾಲೆಗಳು ಇಲ್ಲಿವೆ.