ವಿಟ್ಲ: ಬಂದ್‌ ವೇಳೆ ರಸ್ತೆ ತಡೆ, ಚಾಲಕನಿಗೆ ಹಲ್ಲೆ 

7
ವಿಟ್ಲ ಹೋಬಳಿ, ಮುಡಿಪು ವ್ಯಾಪ್ತಿಯಲ್ಲಿ ಬಂದ್‌ ಪೂರ್ಣ

ವಿಟ್ಲ: ಬಂದ್‌ ವೇಳೆ ರಸ್ತೆ ತಡೆ, ಚಾಲಕನಿಗೆ ಹಲ್ಲೆ 

Published:
Updated:
Deccan Herald

ವಿಟ್ಲ: ತೈಲ ಬೆಲೆ ಏರಿಕೆ ಖಂಡಿಸಿ, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿದ್ದ ಬಂದ್‌ ವಿಟ್ಲ ಪರಿಸರದಲ್ಲಿ ಪೂರ್ಣ ವಾಗಿತ್ತು. ಕೆಲವೆಡೆ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚಿದ್ದರೆ, ಕೆಲವು ಕಡೆ ಕಿಡಿಗೇಡಿಗಳು ವಾಹನ ಸಂಚಾರ ತಡೆದರು, ಖಾಸಗಿ ಮತ್ತು ಸರ್ಕಾರಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದ್ದುವು.

ಖಾಸಗಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಸರ್ಕಾರಿ ಬಸ್‌ಗಳು ಕೆಲ ಹೊತ್ತು ಸಂಚಾರ ಪ್ರಾರಂಭಿಸಿದ್ದು, ಬಳಿಕ ಸ್ಥಗಿತಗೊಂಡವು.  ಹಾಲು, ಪತ್ರಿಕೆ, ಔಷಧಿ ಅಂಗಡಿಗಳು ಬೆರಳೆಣಿಯಷ್ಟು ಇತರ ಅಂಗಡಿಗಳು ತೆರೆದಿದ್ದುವು. ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್ ನೇತೃತ್ವದ ತಂಡ  ಪೇಟೆಯಲ್ಲಿ ಸಂಚರಿಸಿ, ಬಂದ್‌ಗೆ ಬೆಂಬಲ ನೀಡುವಂತೆ ವಿನಂತಿಸಿದ್ದರು.

ರಿಕ್ಷಾ, ಟೂರಿಸ್ಟ್‌ ಕಾರುಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಖಾಸಗಿ ವಾಹನ ಸಂಚಾರ ನಿರಾತಂಕವಾಗಿತ್ತು. ವಿಟ್ಲದ ಹಳೆ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳಿಲ್ಲದೇ ಬಿಕೋ ಎನ್ನುತ್ತಿತ್ತು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ಗಳು ಸಾಲುಗಟ್ಟಿ ನಿಂತಿದ್ದುವು.  ಸಂಚಾರ ಚೌಲಭ್ಯಕ್ಕಾಗಿ ಜನರು ಪರದಾಡುವಂತಾಯಿತು. ವಿಟ್ಲ ಪಡ್ನೂರು ಗ್ರಾಮದ ಕಡಂಬು, ವಿಟ್ಲದ ಮೇಗಿನಪೇಟೆ, ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಟೈರ್‌ಗಳಿಗೆ ಬೆಂಕಿ ಹಾಕಿ ವಾಹನ ಸಂಚಾರ ತಡೆಯಲು ಕೆಲವು ಕಿಡಿಗೇಡಿಗಳ ಪ್ರಯತ್ನ,  ಒಕ್ಕೆತ್ತೂರು ಎಂಬಲ್ಲಿ ಬ್ಯಾರಿಕೇಡ್‌ ಇರಿಸಿ ರಸ್ತೆ ಸಂಚಾರ ಬಂದ್ ಮಾಡುವ ಪ್ರಯತ್ನವನ್ನು ವಿಟ್ಲ ಪೊಲೀಸರು ತೆರವುಗೊಳಿಸಿದರು. ವಿಟ್ಲ ಹೊರವಲಯದ ಕನ್ಯಾನ, ಸಾಲೆತ್ತೂರು, ಮಾಣಿ ಭಾಗದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿದ್ದುವು.

ಬಂದ್‌ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್ ಅವರು ವಿಟ್ಲ ಹೋಬಳಿ ವ್ಯಾಪ್ತಿಯಲ್ಲಿ  ಬಂದ್ ಯಶಸ್ಸಿಯಾಗಿದೆ ಎಂದರು.

ಪೆರುವಾಯಿಯಲ್ಲಿ: ಕಾಂಗ್ರೆಸ್ ಪಕ್ಷ ಹಾಗೂ ವಿವಿಧ ಸಂಘಟನೆಗಳು ಭಾರತ ಬಂದ್ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಪೆರುವಾಯಿ ವಲಯ ಕಾಂಗ್ರೆಸ್ ವತಿಯಿಂದ ಟಯರ್ಗಳಿಗೆ ಬೆಂಕಿ ಹಾಕಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಪೆರುವಾಯಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಬ್ದುಲ್ಲ ಕುಂಞ ಹಾಜಿ ಮಾತನಾಡಿ ಕೇಂದ್ರ ಸಕರ್ಾರ ಬಡವರ ರಕ್ತವನ್ನು ಹೀರುತ್ತಿದೆ. ಬಡವರ ರಕ್ಷಣೆ ಮಾಡುತ್ತೇವೆ ಎಂದು ಮೋದಿಯವರು ಬಡವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಪೆಟ್ರೋಲ್ ಡಿಸೀಲ್ ಬೆಲೆ ಏರಿಕೆಯಿಂದ ವಾಹನ ಚಾಲಕರಿಗೆ ಮಾತ್ರವಲ್ಲದೇ ದೇಶದ ಎಲ್ಲ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ಹಲವು ಆಶ್ವಾಸನೆ ನೀಡಿದ್ದರು. ಆದರೆ ಯಾವೂದನ್ನೂ ಅವರು ಈಡೇರಿಸಿಲ್ಲ ಎಂದು ದೂರಿದರು.  ಬಳಿಕ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲಿ ಟಯರ್ಗಳಿಗೆ ಬೆಂಕಿ ಹಾಕಿ ಪ್ರಧಾನಿ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭ ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಲ್ಫ್ ಡಿಸೋಜ, ಉಪಾಧ್ಯಕ್ಷೆ ಮಾಲತಿ, ಸದಸ್ಯರಾದ ಬಾಲಕೃಷ್ಣ ಪೂಜಾರಿ, ಗೋಪಾಲಕೃಷ್ಣ, ಉಮಾವತಿ, ಪೆರುವಾಯಿ ಕಾಂಗ್ರೆಸ್ ವಲಯಾಧ್ಯಕ್ಷ ಪಂಚಪಾಲ ಶೆಟ್ಟಿ, ಶ್ರೀಧರ್ ಬಾಳೆಕಲ್ಲು, ರಾಜೇಂದ್ರ ರೈ, ಪುಷ್ಪಾಲತಾ, ಮೊದಲಾದವರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !