ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರತ್ಕಲ್: ರಸ್ತೆ ಕಾಮಗಾರಿ ವಿಳಂಬ ವಿರೋಧಿಸಿ ಪ್ರತಿಭಟನೆ

ಸುರತ್ಕಲ್–ಕಾನ ರಸ್ತೆ: ಒಂದು ತಿಂಗಳ ಗಡುವು ನೀಡಿದ ಪ್ರತಿಭಟನಕಾರರು
Last Updated 19 ಮಾರ್ಚ್ 2023, 7:15 IST
ಅಕ್ಷರ ಗಾತ್ರ

ಸುರತ್ಕಲ್: ‌ನನೆಗುದಿಗೆ ಬಿದ್ದಿರುವ ಕಾನ- ಬಾಳದ ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಒತ್ತಾಯಿಸಿ ಕಾನ ಜಂಕ್ಷನ್ ಬಳಿ ಡಿವೈಎಫ್ಐ ಸಂಘಟನೆ ಹಾಗೂ ಆಟೊರಿಕ್ಷಾ ಚಾಲಕರ ಸಂಘದವರು ಶುಕ್ರವಾರ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.

ಜನರ ಹೋರಾಟದಿಂದ ಮೇಲ್ದರ್ಜೆಗೇರಿದ್ದ ಸುರತ್ಕಲ್- ಕಾನ- ಬಾಳ ರಸ್ತೆ ಅಭಿವೃದ್ಧಿ ಕಾರ್ಯ ಕಾನ ಜಂಕ್ಷನ್‌ವರೆಗೆ ಮಾತ್ರ ಕಾಂಕ್ರೀಟಿಕರಣ ಆಗಿದ್ದು, ಕಾನದಿಂದ ಬಾಳ, ಎಂಆರ್‌ಪಿಎಲ್ ಮುಖ್ಯ ದ್ವಾರದವರೆಗಿನ ಕಾಮಗಾರಿ ಕುಂಟುತ್ತ ಸಾಗುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದು, ಪರಿಸರದಲ್ಲಿ ದೂಳು ಹರಡಿ ಜನರ ಆರೋಗ್ಯಕ್ಕೆ ತೊಂದರೆ ಆಗುತ್ತಿದೆ. ಅಂಗನವಾಡಿ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿ ಅಂಗನವಾಡಿ ಕೇಂದ್ರ ಮುಚ್ಚುವ ಸ್ಥಿತಿಗೆ ತಲುಪಿದೆ. ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಂಡು ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಪ್ರತಿಭಟನಕಾರರು ಒತ್ತಾಯಿಸಿದರು.

ಒಂದು ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಡಿವೈಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್ ಎಚ್ಚರಿಸಿದರು.

ಡಿವೈಎಫ್ಐ ನಗರ ಘಟಕದ ಉಪಾಧ್ಯಕ್ಷ ಶ್ರೀನಾಥ್ ಕುಲಾಲ್, ಆಟೊರಿಕ್ಷಾ ಚಾಲಕರ ಸಂಘದ ಮುಖಂಡ ಗಣೇಶ್ ಪ್ರೇಮ್‌ನಗರ, ಡಿವೈಎಫ್ಐ ಮುಖಂಡರಾದ ಸಾದಿಕ್ ಕಿಲ್ಪಾಡಿ, ಮುಸ್ತಫಾ ಅಂಗರಗುಂಡಿ, ನವಾಜ್ ಕುಳಾಯಿ, ಮಕ್ಸೂದ್ ಬಿ.ಕೆ, ಐ. ಮೊಹಮ್ಮದ್, ರಫೀಕ್ ಸ್ಟಾರ್, ಹುಸೈನ್ ಬಾಳ, ಸೈಫರ್ ಆಲಿ ಚೊಕ್ಕಬೆಟ್ಟು, ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಮೊಹಮ್ಮದ್ ಶರೀಫ್ ಕಾನ, ಸಾಮಾಜಿಕ ಮುಖಂಡರಾದ ಜಗದೀಶ್ ಕಾನ, ಫ್ರಾನ್ಸಿಸ್, ಮೆಹಬೂಬ್ ಖಾನ್, ಆಟೊರಿಕ್ಷಾ ಚಾಲಕರ ಸಂಘದ ಹಂಝ ಮೈಂದಗುರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT