ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ- ಸಿದ್ದರಾಮಯ್ಯ ತಿಕ್ಕಾಟದಿಂದ ಧರಣಿ: ಆರ್ ಅಶೋಕ್

Last Updated 19 ಫೆಬ್ರುವರಿ 2022, 9:37 IST
ಅಕ್ಷರ ಗಾತ್ರ

ಮಂಗಳೂರು: ವಿಧಾನಸಭೆಯಲ್ಲಿ ಜನರ ಸಮಸ್ಯೆ ಬಗ್ಗೆ ಚರ್ಚಿಸುವ ಬದಲು ಧರಣಿ ನಡೆಸುತ್ತಿದ್ದಾರೆ. ಡಿಕೆಶಿ ಹಿಜಾಬ್ ಪರ ಇಲ್ಲ. ಸಿದ್ದರಾಮಯ್ಯ ಕೇಸರಿ ಪರ ಇಲ್ಲ. ಅವರಿಬ್ಬರ ತಿಕ್ಕಾಟದಲ್ಲಿ ಧರಣಿ ನಡೆಯುತ್ತಿದೆ ಎಂದು ಸಚಿವ ಆರ್. ಅಶೋಕ ಹೇಳಿದರು.

ನಗರದಲ್ಲಿ ಕಡತ ವಿಲೇವಾರಿ ಅಭಿಯಾನವನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಊರಿಗೆ ಮನುಷ್ಯ ಅಲ್ಲ.‌ಮಸಣಕ್ಕೆ ಹೆಣ ಅಲ್ಲ ಎನ್ನುವ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ ಎಂದರು.

ಈಶ್ವರಪ್ಪ ಹೇಳಿಕೆ ಅವರಿಗೆ ಕೇವಲ ನೆಪ. ಕಾಂಗ್ರೆಸ್‌ಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇಲ್ಲ. ಹಿಜಾಬ್ ವಿರುದ್ದ ಮಾತಾಡಿದರೆ ವೋಟ್ ಹೋಗುತ್ತದೆ ಎನ್ನುವ ಭಯ. ಅಧಿವೇಶನಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಇದೆ. ಅದು ಜನತೆಯ ತೆರಿಗೆ ಹಣ. ಕಾಂಗ್ರೆಸ್‌ನವರು ಇಲ್ಲಿ ನಿದ್ದೆ ಮಾಡುವ ಮೂಲಕ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.

ಹಿಜಾಬ್ ಬಗ್ಗೆ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.

ಕಡತ ವಿಲೇವಾರಿ ಅಭಿಯಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಶಾಸಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT