ಉಪ್ಪಿನಂಗಡಿ: 30ರಂದು ಮರಳು ಸತ್ಯಾಗ್ರಹ

7
30ರಂದು ಮಹಾತ್ಮ ಗಾಂಧೀಜಿ ಪುಣ್ಯತಿಥಿ; ದಂಡಿ ಯಾತ್ರೆ ಶೈಲಿಯಲ್ಲಿ ಪ್ರತಿಭಟನೆ

ಉಪ್ಪಿನಂಗಡಿ: 30ರಂದು ಮರಳು ಸತ್ಯಾಗ್ರಹ

Published:
Updated:
Prajavani

ಉಪ್ಪಿನಂಗಡಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ತಲೆದೋರಿರುವ ಮರಳು ಸಮಸ್ಯೆಯನ್ನು ಸರ್ಕಾರದ ಗಮನ ಸೆಳೆಯುವ ಮತ್ತು ಬಡವರಿಗೆ ಸುಲಭದಲ್ಲಿ ಮರಳು ದೊರಕುವ ನಿಟ್ಟಿನಲ್ಲಿ ಉಪ್ಪಿನಂಗಡಿಯಲ್ಲಿ ಇದೇ 30ರಂದು (ಮಹಾತ್ಮ ಗಾಂಧೀಜಿ ಪುಣ್ಯತಿಥಿ) ಮರಳು ಸತ್ಯಾಗ್ರಹ ನಡೆಸುವ ಬಗ್ಗೆ ನಿರ್ಧರಿಸಲಾಯಿತು.

ಶುಕ್ರವಾರ ಉಪ್ಪಿನಂಗಡಿಯಲ್ಲಿ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ವಿಲ್ಫ್ರೆಡ್ ಡಿ'ಸೋಜಾ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿಗಳು, ಸಂಘ ಸಂಸ್ಥೆ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು.

ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್ ವಿಷಯ ಪ್ರಸ್ತಾಪಿಸಿ ಮರಳು ಸಮಸ್ಯೆಯಿಂದಾಗಿ ಅಭಿವೃದ್ಧಿ ಕೆಲಸಗಳು ಕುಂಟಿತವಾಗಿದೆ, ಅದರಲ್ಲೂ ಬಡವರಿಗೆ ಬಸವ ವಸತಿ ಯೋಜನೆ ಮಂಜೂರು ಆಗಿರುವ ಮನೆಗಳನ್ನು ನಿಮರ್ಿಸಲು ಮರಳು ದೊರಕದಂತಾಗಿದೆ. ಬಡವರು ಮನೆ ನಿಮರ್ಾಣಕ್ಕೆ ಪಿಕ್ಅಪ್ ವಾಹನದಲ್ಲಿ ಮರಳು ತಂದರೂ ಅದನ್ನು ಪೊಲೀಸರು ಹಿಡಿದು ಕೇಸು ಹಾಕುತ್ತಾರೆ. ದೊಡ್ಡ ಕುಳಗಳು ಲಾರಿಯಲ್ಲಿ ಸಾಗಾಟ ಮಾಡುವುದಕ್ಕೆ ಯಾವುದೇ ಅಡೆತಡೆ ಇರುವುದಿಲ್ಲ, ಇದು ಸರಿ ಆಗಬೇಕಾಗಿದೆ, ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ ಎಂದರು.

ಕಾಮರ್ಿಕ ಮುಖಂಡ ಬಿ.ಎಂ. ಭಟ್ ಮಾತನಾಡಿ ಆಧುನೀಕರಣದ ಹೆಸರಿನಲ್ಲಿ ಮರಳು ಕೇಂದ್ರೀಕರಣ ಮಾಡುವ ತಂತ್ರ ನಡಿತಾ ಇದೆ, ಮರಳು ದೊರಕುವುದಿಲ್ಲ ಎನ್ನುವಂತಿಲ್ಲ, 1 ಲೋಡು ಮರಳು ಬೇಕಾದರೆ 18, 20 ಸಾವಿರ ರೂಪಾಯಿ ಕೊಟ್ಟರೆ ದೊರಕುತ್ತದೆ, ಶಾಲಾ ಕಟ್ಟಡ, ದುರಸ್ಥಿ ಮಾಡಲು ಅನುದಾನ ಬಂದರೆ ಆ ಹಣ ಮರಳು ತರಿಸಲು ಸಾಕಾಗುವುದಿಲ್ಲ, ಇನ್ನು ಬಡವರು ಮನೆಯಲ್ಲಿ ಮದುವೆ ಕಾರ್ಯ ಇದ್ದು, ಮನೆ ರಿಪೇರಿ ಮಾಡುವ ಅಂದರೆ ಮರಳು ದೊರಕುತ್ತಿಲ್ಲ, ಈ ರೀತಿಯಾದ ಸಮಸ್ಯೆಗಳು ಕಾಡುತ್ತಿದೆ, ಪಂಚಾಯಿತಿ ಮೂಲಕ ಸುಲಭವಾಗಿ ಮರಳು ದೊರಕುವಂತೆ ಆಗಬೇಕು, ಈ ರೀತಿಯಲ್ಲಿ ಸಕರ್ಾರದ ಗಮನ ಸೆಳೆಯುವ ಕೆಲಸ ಆಗಬೇಕು ಎಂದರು.

ವಿಲ್ಫ್ರೆಡ್ ಡಿ'ಸೋಜಾ ಮಾತನಾಡಿ ಮರಳು ಸಮಸ್ಯೆ ಗಂಭೀರ ಸಮಸ್ಯೆ ಆಗಿದ್ದು, ಇದನ್ನು ಲಘುವಾಗಿ ಪರಿಗಣಿಸುವಂತಿಲ್ಲ, ನಾವುಗಳು ಹಿಂದೆ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ಮಾಡಿದ ರೀತಿಯಲ್ಲಿ ಮರಳು ಸತ್ಯಾಗ್ರಹ ಮಾಡೋಣ, ಎರಡು ನದಿ ಹರಿಯುವ ಉಪ್ಪಿನಂಗಡಿಯಲ್ಲಿ ಇದಕ್ಕೆ ಸೂಕ್ತ ಜಾಗವಾಗಿದ್ದು, ಈ ನಿಟ್ಟಿ ನಾವು ಸಂಘಟಿತರಾಗಿ ಹೋರಾಟ ಮಾಡೋಣ ಎಂದರು. ಅದರಂತೆ ಮಹಾತ್ಮ ಗಾಂಧೀಜಿಯವರ ದಂಡಿ ಯಾತ್ರೆ ರೀತಿಯಲ್ಲಿ ಮರಳು ಸತ್ಯಾಗ್ರಹ ನಡೆಸೋಣ ಎಂದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.

ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್ ಅತ್ರಮಜಲು, ಸುನಿಲ್ ಕುಮಾರ್, ಯು.ಕೆ. ಇಬ್ರಾಹಿಂ, ಚಂದ್ರಶೇಖರ ಮಡಿವಾಳ, ಇಳಂತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೂಸುಫ್ ಪೆದಮಲೆ, ಬಜತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್, ತಣ್ಣೀರುಪಂಥ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯವಿಕ್ರಂ, ನಮ್ಮೂರು ನಮ್ಮವರು ಸಂಘಟನೆಯ ಜಿತೀಂದ್ರ ಶೆಟ್ಟಿ, ವಿವಿಧ ಸಂಘಟನೆ ಮುಖಂಡರಾದ ಅಶ್ರಫ್ ಬಸ್ತಿಕ್ಕಾರ್, ಮಂಜುನಾಥ ಬೆಳ್ತಂಗಡಿ ಮಾತನಾಡಿದರು.

ಬಜತ್ತೂರು ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರೆಸಿಲ್ಲಾ ಪಿಂಟೋ, ತೇಜ ಕುಮಾರಿ, ನೆಕ್ಕಿಲಾಡಿ ಅಬ್ದುಲ್ ರಹಿಮಾನ್, ರೋಟರಿ ಸಂಸ್ಥೆಯ ಇಸ್ಮಾಯಿಲ್ ಇಕ್ಬಾಲ್, ವಿವಿಧ ಸಂಘಟನೆ ಮುಖಂಡರಾದ ರೂಪೇಶ್ ಅಲಿಮಾರ್, ಇಬ್ರಾಹಿಂ ಮೋನು ಪಿಲಿಗೂಡು, ಆದಂ ಕೊಪ್ಪಳ ಇದ್ದರು. ಸಭೆಯಲ್ಲಿ ಹೋರಾಟ ಸಮಿತಿಯನ್ನು ರಚಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !