ಪುತ್ತೂರು: ‘ಈ ಬಾರಿಯ ಪುತ್ತೂರು ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವದಲ್ಲಿ ಹೆಚ್ಚು ಜನ ಭಾಗವಹಿಸಿದ್ದು, ಭಕ್ತರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿತ್ತು. ಆದರೂ ಇಲ್ಲಿನ ಹಳೆಯ ಕಟ್ಟಡ ಕೆಡವಿದ ಆರೋಪವನ್ನು ನಮ್ಮ ಮೇಲೆ ಹೊರಿಸಲಾಗಿದೆ. ಜನರಿಗೆ ತೊಂದರೆಯಾಗುತ್ತದೆ ಎಂದು ಈ ಕಟ್ಟಡ ಕೆಡವಲಾಗಿದೆಯೇ ಹೊರತು ಇದರಲ್ಲಿ ವೈಯಕ್ತಿಕ ಆಸಕ್ತಿಗಳಿಲ್ಲ’ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.

ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಳ್ಳಾಲ್ತಿ ಅಮ್ಮನವರು ಮತ್ತು ಮಹಾಲಿಂಗೇಶ್ವರ ದೇವರ ಭೇಟಿಯನ್ನು ಭಕ್ತರಿಗೆ ನೋಡಬೇಕು ಎಂಬ ಉದ್ದೇಶದಿಂದ ಹಳೆಯ ಕಟ್ಟಡವನ್ನು ತೆರವುಗೊಳಿಸಲಾಗಿದೆ. ಈ ಕಟ್ಟಡವನ್ನು ಭಕ್ತರು ಕೆಡವಿದಾಗ ನಾವು ಅದನ್ನು ಬೇಡ ಎಂದು ಹೇಳಿಲ್ಲ. ಮುಂಜಾಗ್ರತೆ ಕ್ರಮವಾಗಿ ಭಕ್ತರೇ ಕಟ್ಟಡ ಕೆಡವಿದ್ದಾರೆ ಎಂದು ಅವರು ತಿಳಿಸಿದರು.

ಈ ಕಟ್ಟಡದ ಕುರಿತು ನಾವು ಆರಂಭದಲ್ಲಿ ಜಾಗದ ಮಾಲಿಕರು ಮತ್ತು ಅವರ ಪರವಾಗಿ ವಾದ ಮಂಡಿಸುವ ಮತ್ತು ನಗರಸಭೆಯ ಪರ ವಾದ ಮಂಡಿಸುವ ವಕೀಲರಲ್ಲಿ ವಿಚಾರವನ್ನು ತಿಳಿದುಕೊಂಡಿದ್ದೇವೆ. ಅದಕ್ಕೆ ಮೊದಲೇ ಲೋಕೋಪಯೋಗಿ ಇಲಾಖೆ ನೋಟ್ ಫಿಟ್ ಸ್ಟೇ ಎಂದು ಕೊಟ್ಟಿದ್ದರು. ನಗರಸಭೆ ಅಲ್ಲಿನ ಮೂರು ಕಟ್ಟಡಗಳನ್ನು ಜಪ್ತಿ ಮಾಡಿದೆ. ಜಾಗದ ಮಾಲೀಕತ್ವಕ್ಕೆ ಸಂಬಂಧಿಸಿ ಈಗಲೂ ಕಾನೂನು ಹೋರಾಟ ನಡೆಯುತ್ತಿದೆ. ಪ್ರಸ್ತುತ ಹೋರಾಟ ಮಾಡುವವರೂ ಅಲ್ಲಿರುವ ಕಟ್ಟಡಗಳನ್ನು ತೆರವು ಮಾಡುವಂತೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ನಾವು ಅವರ ವಕೀಲರಲ್ಲಿ ಮಾತನಾಡಿದ್ದೇವೆ. ಹೀಗಿರುವಾಗ ಕೆಲವೊಂದು ಮಾಧ್ಯಮದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಶಾಸಕರು ದರ್ಪವನ್ನು, ಅಹಂಕಾರ ತೋರಿಸುತ್ತಿದ್ದಾರೆ. ಆ ಜಾಗದಲ್ಲಿ ರಿಯಲ್ ಎಸ್ಟೇಟ್ ಮಾಡಲು ಹೊರಟಿದ್ದಾರೆ ಎಂಬ ಆರೋಪಗಳನ್ನು ನನ್ನ ಮೇಲೆ ಹಾಕುತ್ತಿದ್ದಾರೆ. ನಮಗೆ ರಿಯಲ್ಎಸ್ಟೇಟ್ ಆಸಕ್ತಿ ಇಲ್ಲ. ನಾವು ಮಾಡಿರುವುದು ಉಳ್ಳಾಲ್ತಿ ಅಮ್ಮನವರು ಮತ್ತು ಮಹಾಲಿಂಗೇಶ್ವರ ದೇವರ ಭೇಟಿಯನ್ನು ಭಕ್ತಾದಿಗಳಿಗೆ ನೋಡಲು ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಮಾತ್ರ ಎಂದರು.

ಉಳ್ಳಾಲ್ತಿ ಮತ್ತು ಮಹಾಲಿಂಗೇಶ್ವರ ಭೇಟಿ ಆಗುವ ಜಾಗವನ್ನು ದೇವಳಕ್ಕೆ ನೀಡುವಂತೆ ಜಾಗದ ಮಾಲೀಕರಲ್ಲಿ ಮಾತನಾಡಬೇಕು ಎಂಬ ಬೇಡಿಕೆ ಇದೆ. ಉಳ್ಳಾಲ್ತಿ ಬರುವ ಜಾಗಕ್ಕೆ ಕಾಂಕ್ರೀಟ್ ರಸ್ತೆ ಮಾಡುವ ಬೇಡಿಕೆ ಇದೆ. ಅದಕ್ಕೆ ಈಗಾಗಲೇ ಅನುದಾನ ಮೀಸಲಿಡಲಾಗಿದೆ. ಮನವೊಲಿದು ಅವರೇ 2 ಎಕರೆ ಜಾಗವನ್ನು ದೇವಳಕ್ಕೆ ಕೊಡಬಹುದು ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-29-816318069

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.