ಪುತ್ತೂರು: ಇಲ್ಲಿನ ಕೆಎಸ್ಆರ್ಟಿಸಿ ಬಸ್ ಡಿಪೊದಲ್ಲಿ ಬಸ್ಗಳಿಗೆ ಕೊರತೆ ಇಲ್ಲ. ಸಿಎನ್ಜಿ ಚಾಲಿತ 25 ಬಸ್ಗಳೂ ಬರಲಿದ್ದು, ಆ ಬಸ್ಗಳು ಮಂಗಳೂರು ಮತ್ತು ಪುತ್ತೂರಿನಲ್ಲಿ ಸಂಚರಿಸಲಿವೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಪುತ್ತೂರಿನಿಂದ ಬೇಲೂರು-ಹಳೇಬೀಡು- ಜಾವಗಲ್ ಮೂಲಕ ಅರಸೀಕೆರೆ ಹಾಗೂ ಮೈಸೂರು ಮೂಲಕ ಬೆಂಗಳೂರಿಗೆ ಆರಂಭಿಸಿರುವ ಬಸ್ ಸೇವೆಗೆ ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಆಟೊ ಚಾಲಕರಿಗೆ ತೊಂದರೆಯಾಗದಂತೆ ಪುತ್ತೂರಿನಲ್ಲಿ ಸಿಟಿ ಬಸ್ ವ್ಯವಸ್ಥೆಗೆ ಯೋಜನೆ ಹಾಕಿಕೊಳ್ಳಲಾಗುವುದು. ಪುತ್ತೂರಿನಿಂದ ಮುಂಬೈಗೆ ನೇರವಾಗಿ ಮಂಗಳೂರು ಮೂಲಕ ಬಸ್ ಓಡಿಸುವ ಯೋಜನೆಯೂ ಇದ್ದು, ಜನರಿಂದ ಬೇಡಿಕೆ ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಾವಗಲ್ನಲ್ಲಿ ಪ್ರಸಿದ್ಧ ದರ್ಗಾ ಇದ್ದು, ಅಲ್ಲಿಗೆ ಹೋಗಲು ಬಸ್ ವ್ಯವಸ್ಥೆ ಮಾಡಬೇಕೆಂದು ಅಲ್ಪಸಂಖ್ಯಾತರು ಮನವಿ ಮಾಡಿದ್ದರು. ಬೇಲೂರು- ಹಳೇಬೀಡಿಗೆ ಹೋಗುವ ಯಾತ್ರಾರ್ಥಿಗಳೂ ಬೇಡಿಕೆ ಇಟ್ಟಿದ್ದರು. ಪ್ರತಿ ದಿನ ಬೆಳಿಗ್ಗೆ ಪುತ್ತೂರಿನಿಂದ 8 ಗಂಟೆಗೆ ಉಪ್ಪಿನಂಗಡಿ-ಸಕಲೇಶಪುರ -ಬೇಲೂರು-ಹಳೇಬೀಡು ಮೂಲಕ ಜಾವಗಲ್-ಅರಸೀಕೆರೆಗೆ ಬಸ್ ಸಂಚರಿಸಲಿದೆ. ಮಧ್ಯಾಹ್ನ 1.45ಕ್ಕೆ ಅಲ್ಲಿಂದ ಹೊರಡುವ ಬಸ್ ಸಂಜೆ 7.15ಕ್ಕೆ ಪುತ್ತೂರಿಗೆ ಬರಲಿದೆ. ರಾತ್ರಿ 9.15ಕ್ಕೆ ಪುತ್ತೂರಿನಿಂದ ಮೈಸೂರು ಮೂಲಕವಾಗಿ ಎಸಿ ಸೂಪರ್ ಡಿಲೆಕ್ಸ್ ಬಸ್ ಹೊರಡಲಿದೆ. ಈ ಬಸ್ ಸೇವೆಗಳು ಏ.1ರಿಂದ ಆರಂಭವಾಗಲಿದೆ ಎಂದರು.

ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ನಿಕಟಪೂರ್ವ ಅಧ್ಯಕ್ಷ ವಿ.ಎಚ್.ಎ. ಶಕೂರ್ ಮಾತನಾಡಿದರು.

ಅಕ್ರಮ ಸಕ್ರಮ ಸಮಿತಿಯ ಸದಸ್ಯ ಮಹಮ್ಮದ್ ಬಡಗನ್ನೂರು, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ದ.ಕ. ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಮಹಮ್ಮದ್ ಆಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಭಾಗವಹಿಸಿದ್ದರು.

ಕೆಎಸ್ಆರ್ಟಿಸಿ ಪುತ್ತೂರು ಘಟಕದ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ಸ್ವಾಗತಿಸಿದರು. ಸಂಚಾರ ನಿಯಂತ್ರಣಾಧಿಕಾರಿ ವೆಂಕಟರಮಣ ಭಟ್ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-29-1153010803

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.