ಪುತ್ತೂರು: ‘ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಮಾತ್ರ ಬಡವರ ಕೆಲಸ, ಅಭಿವೃದ್ಧಿ ಕಾರ್ಯಗಳು ಆಗುತ್ತದೆ. ಚುನಾವಣೆ ಸಂದರ್ಭ ಧರ್ಮದ ಹೆಸರು ಹೇಳಿಕೊಂಡು ಜನರನ್ನು ಮರಳು ಮಾಡಿ ಮತ ಪಡೆದು ಗೆದ್ದವರು ಜನರ ಸಂಕಷ್ಟಕ್ಕೆ ಸ್ಪಂದಿಸಿಲ್ಲ’ ಎಂದು ಶಾಸಕ ಅಶೋಕ್ ರೈ ಹೇಳಿದರು.

ತಾಲ್ಲೂಕಿನ ಕೆಯ್ಯೂರು ಗ್ರಾಮದ ಕಣಿಯಾರಿನಲ್ಲಿ ₹65 ಲಕ್ಷ ಅನುದಾನದ ನೂತನ ಸೇತುವೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಮುಖಂಡ ಎ.ಕೆ. ಜಯರಾಮ ರೈ ಮಾತನಾಡಿ, ಅಭಿವೃದ್ಧಿ ಮಾಡಲು ಇಚ್ಛಾಶಕ್ತಿ ಬೇಕು. ಅದು ಶಾಸಕ ಅಶೋಕ್ ಅವರಿಗಿದೆ. ಮುಂದಿನ ಬಾರಿಯೂ ಅವರೇ ಶಾಸಕರಾಗಿ ಬರಬೇಕು ಎಂದು ನಾವು ಪ್ರತಿಜ್ಞೆ ಮಾಡಬೇಕು ಎಂದರು.

ಸ್ಥಳೀಯರಾದ ದಾಮೋದರ ಪೂಜಾರಿ, ಅವಿನಾಶ್, ಕೆಯ್ಯೂರು ವಲಯ ಕಾಂಗ್ರೆಸ್ ಅಧ್ಯಕ್ಷ ಜಯಂತ್ ಪೂಜಾರಿ ಕೆಂಗುಡೇಲು, ಭಾರತಿ, ಮುಖಂಡರಾದ ಸಂತೋಷ್ ರೈ ಇಳಂತಾಜೆ, ಬಟ್ಯಪ್ಪ ರೈ ದೇರ್ಲ, ರವೀಂದ್ರ ಕಣಿಯಾರು, ಸಂತೋಷ್ ರೈ ದೇರ್ಲ, ಅಬ್ದುಲ್ ಖಾದರ್ ಮೇರ್ಲ, ಹನೀಫ್ ಕೆ.ಎಂ, ಸರಸ್ವತಿ ಓಡಪಲ್ಲ, ತಿಮ್ಮಪ್ಪ ಪೂಜಾರಿ ಕಣಿಯಾರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-29-592321361

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.