ಪುತ್ತೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ತಾಲ್ಲೂಕು ಘಟಕದ ವತಿಯಿಂದ ಜ್ಞಾನವಿಕಾಸದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ನೀರವಳಿಕೆಯ ಚಂದ್ರಾವತಿ ಅವರಿಗೆ ‘ವಾತ್ಸಲ್ಯ’ ಮನೆಯನ್ನು ನಿರ್ಮಿಸಿಕೊಡಲಾಯಿತು.

ಮನೆಯನ್ನು ಚಂದ್ರಾವತಿ ಅವರಿಗೆ ಹಸ್ತಾಂತರಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ, ‘ಸವಲತ್ತು ಇಲ್ಲದವರನ್ನು ಗುರುತಿಸಿ ಜೀವನ ಮಟ್ಟ ಉತ್ತಮಗೊಳಿಸುವ ಉದ್ದೇಶದಿಂದ ಕಾರಣಕ್ಕೆ ವಾತ್ಸಲ್ಯ ಕಾರ್ಯಕ್ರಮ ನಡೆಯುತ್ತಿದೆ’ ಎಂದರು.

ಈಶ್ವರಮಂಗಲ ಪಂಚಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣ ಭಟ್ ಮುಂಡ್ಯ, ಧರ್ಮಸ್ಥಳ ಯೋಜನೆಯ ನಿಃಸ್ವಾರ್ಥ ಸೇವೆಗಳಿಂದ ಅನೇಕ ಮಂದಿ ಬಡವರ ಬದುಕು ಅಭಿವೃದ್ಧಿಯಾಗಿದೆ ಎಂದರು.

ಉದ್ಯಮಿ ಕೃಷ್ಣಪ್ರಸಾದ್ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾಲ್ಲೂಕು ಯೋಜನಾಧಿಕಾರಿ ಶಶಿಧರ್ ಎಂ., ಜನಜಾಗೃತಿ ವೇದಿಕೆಯ ಅರಿಯಡ್ಕ ವಲಯದ ಮಾಜಿ ಅಧ್ಯಕ್ಷ ನಾರಾಯಣ ರೈ ಕುದ್ಕಾಡಿ, ಅಧ್ಯಕ್ಷ ವಿಕ್ರಂ ರೈ ಸಾಂತ್ಯ, ನೆಟ್ಟಣಿಗೆ ಮೂಡ್ನೂರು ಪಂಚಾಯಿತಿ ಉಪಾಧ್ಯಕ್ಷ ರಾಮ ಮೇನಾಲ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅರಿಯಡ್ಕ ವಲಯಾಧ್ಯಕ್ಷ ದಿನೇಶ್ ರೈ ಕುತ್ಯಾಳ, ಪ್ರಗತಿಪರ ಕೃಷಿಕ ಲಕ್ಷ್ಮೀನಾರಾಯಣ ಕುಂಜತ್ತಾಯ, ಮೇನಾಲ ಒಕ್ಕೂಟದ ಮಾಜಿ ಅಧ್ಯಕ್ಷ ಬಾಲಕೃಷ್ಣ ರೈ ಮೇನಾಲ, ಅಧ್ಯಕ್ಷೆ ಗೀತಾ ಮೇನಾಲ ಇದ್ದರು.

ಯೋಜನೆಯ ವಲಯ ಮೇಲ್ವಿಚಾರಕ ಹರೀಶ್ ಕೆ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಸುಂದರ್ ಜಿ ವಂದಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260319-29-771414452

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.