ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಪುತ್ತೂರು ದಸರಾ ನಾಡಹಬ್ಬ’ ಈ ಬಾರಿ ಸ್ಥಗಿತ

Published : 2 ಅಕ್ಟೋಬರ್ 2024, 4:21 IST
Last Updated : 2 ಅಕ್ಟೋಬರ್ 2024, 4:21 IST
ಫಾಲೋ ಮಾಡಿ
Comments

ಪುತ್ತೂರು: ಸಾಹಿತಿ ಶಿವರಾಮ ಕಾರಂತರು 1931ರಲ್ಲಿ ಪ್ರಾರಂಭಿಸಿದ `ಪುತ್ತೂರು ದಸರಾ ನಾಡಹಬ್ಬ' ಈ ಬಾರಿ ಮತ್ತೆ ಸ್ಥಗಿತಗೊಂಡಿದೆ. ದಶಕಗಳ ಇತಿಹಾಸ ಹೊಂದಿರುವ ಈ ಐತಿಹಾಸಿ ಉತ್ಸವ ಇದೀಗ ಎರಡನೆಯ ಬಾರಿ ಸ್ಥಗಿತಗೊಂಡಂತಾಗಿದೆ.

ನೆಲ್ಲಿಕಟ್ಟೆಯ ಶಾಲೆಯಲ್ಲಿ ಆರಂಭಿಸಿದ ಈ ಉತ್ಸವದಲ್ಲಿ ದಸರೆ ನೆಪದಲ್ಲಿ ಸಾಹಿತ್ಯ ಚಿಂತನೆಯನ್ನು ಹಂಚಲು ಪ್ರಮುಖರನ್ನು ಕರೆಯಿಸಿ ಉಪನ್ಯಾಸ ಆಯೋಜಿಸುವ ಪರಿಪಾಠವನ್ನು ಕಾರಂತರು ಆರಂಭಿಸಿದ್ದರು. ಕೆಲವು ವರ್ಷಗಳು ಸಂಭ್ರಮದಿಂದ ನಡೆದ ಈ ಉತ್ಸವ ಮಧ್ಯೆ ಒಮ್ಮೆ ಸ್ಥಗಿತಗೊಂಡಿತ್ತು. ಇದನ್ನು ಮತ್ತೆ ಪುನರಾರಂಭಿಸಿದ ಹೆಗ್ಗಳಿಕೆ ಕಾರಂತರ ಬಾವ ಸದಾಶಿವ ರಾಯ ಅವರಿಗೆ ಸಲ್ಲುತ್ತದೆ. ನೆಲ್ಲಿಕಟ್ಟೆಯಲ್ಲಿ ನಡೆಯುತ್ತಿದ್ದ ನಾಡಹಬ್ಬವನ್ನು ಕೆಲವು ಕಾರಣಗಳಿಗೆ ಪುತ್ತೂರಿನ ಮಹಾಲಿಂಗೇಶ್ವರ ದೇವಳಕ್ಕೆ ಸ್ಥಳಾಂತರಿಸಲಾಗಿತ್ತು. ಬಳಿಕ ಒಂದೆರಡು ವರ್ಷ ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದ ಚೌಕಟ್ಟಿಗೆ ಸೀಮಿತಗೊಂಡು ಕಾರ್ಯಕ್ರಮ ನಡೆದಿತ್ತು. ಆ ಬಳಿಕ ಮತ್ತೆ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿತ್ತು.

‘ಈ ಬಾರಿ ಈ ನಾಡಹಬ್ಬವನ್ನು ಮುಂದುವರಿಸುವ ಜನರಿಗಾಗಿ ಹುಡುಕಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಂದು ವಾರ ಸಾಂಸ್ಕೃತಿಕ ಕಾರ್ಯಕ್ರಮ, ಉಪನ್ಯಾಸ ಆಯೋಜನೆ ಮಾಡುವುದು ಅಸಾಧ್ಯ ಎಂಬ ಅಭಿಪ್ರಾಯಗಳು ವ್ಯಕ್ತವಾದ ಕಾರಣ ಈ ಬಾರಿ ಪುತ್ತೂರು ದಸರಾ ನಾಡಹಬ್ಬವನ್ನು ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಬಂದಿದೆ’ ಎನ್ನುತ್ತವೆ ಮೂಲಗಳು.

ಕಾರಂತರ ಆಶಯದ ನಾಡಹಬ್ಬವನ್ನು ಮುನ್ನಡೆಸಿಕೊಂಡು ಬರುವಲ್ಲಿ, ಬೋಳಂತಕೋಡಿ, ಪ್ರೊ. ಮೊಳೆಯಾರ್, ಎನ್. ಸುಬ್ರಹ್ಮಣ್ಯ ಕೊಳತ್ತಾಯ, ಬಿ.ಐತ್ತಪ್ಪ ನಾಯ್ಕ್, ಬಿ.ಪುರಂದರ ಭಟ್, ಪ್ರೊ. ವಿ.ಬಿ ಅರ್ತಿಕಜೆ, ರಮೇಶ್ ಬಾಬು, ವತ್ಸಲ ರಾಜ್ಞಿ, ಎ.ವಿ.ನಾರಾಯಣ, ಹರಿನಾರಾಯಣ ಮಾಡಾವು, ಶ್ರೀಗಿರೀಶ್ ಮಳಿ, ಸೀತಾರಾಮ ಶಾಸ್ತ್ರಿ, ಎಂ.ಟಿ.ಜಯರಾಮ್ ಭಟ್, ವಾಟೆಡ್ಕ ಕೃಷ್ಣ ಭಟ್, ಎನ್.ಕೆ.ಜಗನ್ನಿವಾಸ ರಾವ್, ನಟ್ಟೋಜ ಸುಬ್ರಹ್ಮಣ್ಯ ರಾವ್ ಮೊದಲಾದವರು ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಈ ಬಾರಿ ನಾಡಹಬ್ಬ ಸಮಿತಿ ಅಧ್ಯಕ್ಷರು ಅನಾರೋಗ್ಯದಲ್ಲಿದ್ದ ಕಾರಣ ತಾತ್ಕಾಲಿಕವಾಗಿ ನಾಡಹಬ್ಬ ಮುಂದೂಡಲಾಗುತ್ತಿದೆ ಎಂದು ಸಮಿತಿಯ ಗೌರವ ಅಧ್ಯಕ್ಷ ಎನ್.ಕೆ.ಜಗನ್ನಿವಾಸರಾವ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT