ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟ ಕಾಲದಲ್ಲಿಯೂ ಸಹನೆ ಕೈಬಿಡಬಾರದು: ತಂಙಳ್

Last Updated 8 ಆಗಸ್ಟ್ 2022, 14:15 IST
ಅಕ್ಷರ ಗಾತ್ರ

ಪುತ್ತೂರು: ಹಿಜಿರಾ ಎಂಬುದು ತ್ಯಾಗ ಮತ್ತು ಸಹನೆಯ ಉದಾತ್ತ ಉದಾಹರಣೆಯಾಗಿದೆ. ಆದ್ದರಿಂದ ಯಾವುದೇ ಸಂಕಷ್ಟ ಸಂದರ್ಭದಲ್ಲಿಯೂ ಸಹನೆಯನ್ನು ಕೈಬಿಡಬಾರದು ಎಂದು ಕುಂಬ್ರದ ಕೆಐಸಿ ಸಂಸ್ಥೆಯ ಅಧ್ಯಕ್ಷ ಹಬೀಬುರ್ರಹ್ಮಾನ್ ತಂಙಳ್ ಹೇಳಿದರು.

ಕುಂಬ್ರದ ಕೆಐಸಿ ಸಂಸ್ಥೆಯಲ್ಲಿ ಪುತ್ತೂರು ವಲಯ ಸಮಸ್ತ ಖತೀಬರ ಒಕ್ಕೂಟದ ವತಿಯಿಂದ ನಡೆದ ಹಿಜಿರಾ ಮತ್ತು ಮುಹರ್ರಮಿನ ಸಂದೇಶ ಸಾರುವ ಮೌಸಿಮುಲ್ ಹಿಜ್ರಾ ಕಾರ್ಯಕ್ರಮದಲ್ಲಿ ಅವರು ಪ್ರಾರ್ಥನೆ ನೆರವೇರಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಂಇಯ್ಯತುಲ್ ಖುತಬಾ ಕೇಂದ್ರೀಯ ಜತೆ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಮಾತನಾಡಿ, ಪ್ರವಾದಿಯವರು ಮಕ್ಕಾದಿಂದ ಮದೀನಕ್ಕೆ ಹಿಜಿರಾ ಹೋದ ಸಂದರ್ಭದಲ್ಲಿ ಅಲ್ಲಿನ ಅನುಯಾಯಿಗಳು ತೋರಿಸಿ ಕೊಟ್ಟ ಪ್ರೀತಿ, ಸೌಹಾರ್ದ ಪರ ಸಹಾಯವೂ ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಜಂಇಯ್ಯತುಲ್ ಖುತಬಾ ಪುತ್ತೂರು ವಲಯದ ಪ್ರಧಾನ ಕಾರ್ಯದರ್ಶಿ ನಝೀರ್ ಅಝ್ಹರಿ ಬೊಳ್ಮಿನಾರ್ ಮಾತನಾಡಿದರು.
ಕೆಐಸಿ ಮುದರ್ರಿಸ್ ಇಸ್ಮಾಯಿಲ್ ಮದನಿ ಕೊಡಿಪ್ಪಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಅಶ್ರಫ್ ದಾರಿಮಿ ಸಂಟ್ಯಾರ್
ಹಸನ್ ಬಾಖವಿ ಮುಕ್ರಂಪಾಡಿ, ಸಿದ್ದೀಕ್ ಫೈಝಿ ಕೊಳ್ತಿಗೆ, ಮುಫತ್ತಿಶ್ ಹನೀಫ್ ಮುಸ್ಲಿಯಾರ್, ಸತ್ತಾರ್ ಕೌಸರಿ ಮತ್ತಿತರ ಉಲಮಾ ಉಮರಾ ನಾಯಕರು ಇದ್ದರು.

ಅಶ್ರಫ್ ರಹ್ಮಾನಿ ವೀರಮಂಗಿಲ ವಂದಿಸಿದರು. ಅಬ್ದುಲ್ ಕರೀಂ ದಾರಿಮಿ ಕುಂಬ್ರ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT