ಪುತ್ತೂರು (ದಕ್ಷಿಣ ಕನ್ನಡ): ತಾಲ್ಲೂಕಿನ ಒಳಮೊಗ್ರು ಗ್ರಾಮದ ಶೇಕಮಲೆ ಜಮಾಅತ್ನ ಮುಸ್ಲಿಂ ಮುಖಂಡರು ಈ ಬಾರಿ ಬಕ್ರೀದ್ ಆಚರಣೆ ಸಂಭ್ರಮಕ್ಕೆ ಒತ್ತು ನೀಡದೆ, ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿರುವ ಮತ್ತು ಚಿಕಿತ್ಸೆಗೆ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ಕುಂಬ್ರದ ಅಮೃತ ಕ್ಲಿನಿಕ್ನ ವೈದ್ಯ ವಿಘ್ನೇಶ್ವರ ಭಟ್ ಅವರಿಗೆ ಆರ್ಥಿಕ ನೆರವು ನೀಡಿದರು.

ಕುಂಬ್ರದಲ್ಲಿ ಹಲವು ವರ್ಷಗಳಿಂದ ಕ್ಲಿನಿಕ್ ನಡೆಸುತ್ತಿರುವ ವಿಘ್ನೇಶ್ವರ ಭಟ್ ಅವರನ್ನು ಕ್ಯಾನ್ಸರ್ ಬಾಧಿಸಿದೆ. ವೃತ್ತಿಯಿಂದ ಸಂಪಾದಿಸಿದ ಹಣವನ್ನು ಚಿಕಿತ್ಸೆಗೆ ವ್ಯಯಿಸಿರುವ ಅವರು, ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ನೆರವು ಕೋರಿದ್ದರು.

ಊರಿನ ವೈದ್ಯರ ಸಂಕಷ್ಟ ಅರಿತ ಜಮಾಅತ್ ಸಮಿತಿಯವರು ಹಿಂದಿನ ಶುಕ್ರವಾರ ಈ ವಿಚಾರವನ್ನು ಮಸೀದಿಯಲ್ಲಿ ಪ್ರಸ್ತಾಪಿಸಿ ವೈದ್ಯರಿಗೆ ಸಹಾಯ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಸುಮಾರು ₹ 52 ಸಾವಿರ ಸಂಗ್ರಹವಾಗಿತ್ತು.

ಹಣ ಸಂಗ್ರಹ ಮಾಡಿ ವೈದ್ಯರ ರೋಗ ಶಮನಕ್ಕಾಗಿ ಕಳೆದ ಶುಕ್ರವಾರ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಗಿತ್ತು. ಬಕ್ರೀದ್ ದಿನವಾದ ಗುರುವಾರವೂ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿತ್ತು. ಮತ್ತೆ ಮಸೀದಿಯಲ್ಲಿ ಹಣ ಸಂಗ್ರಹಿಸಿ, ಸಂಗ್ರಹವಾದ ಒಟ್ಟು ₹ 58,013ವನ್ನು ಶೇಕಮಲೆ ಜಮಾಅತ್ ಪ್ರಮುಖರು ವಿಘ್ನೇಶ್ವರ ಭಟ್ ಅವರ ಮನೆಗೆ ತೆರಳಿ ನೀಡಿದರು.

ಈ ವೈದ್ಯರಿಗೆ ಮುಂದೆಯೂ ಸಹಾಯ ಮಾಡುವ ಭರವಸೆ ನೀಡಿದ್ದೇವೆ ಎಂದು ಸಮಿತಿ ಕಾರ್ಯ ದರ್ಶಿ ಎಸ್.ಪಿ.ಬಶೀರ್ ತಿಳಿಸಿದರು.

ಜಮಾಅತ್ ಸದಸ್ಯರಾದ ಎಸ್.ಎಂ.ಮಹಮ್ಮದ್ ಕುಂಬ್ರ, ಸಲಾಮುದ್ದೀನ್ ಕುಂಬ್ರ, ನಾಸಿರ್ ಕುಂಬ್ರ, ಮಹಮ್ಮದ್ ಬೊಳ್ಳಾಡಿ, ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ಬಶೀರ್ ಕೌಡಿಚ್ಚಾರ್, ರಿಝ್ವಾನ್ ಕೌಡಿಚ್ಚಾರ್, ಮೊಯ್ದೀನ್ ಅಲಂಗೂರು, ಅಝರ್ ಕುಂಬ್ರ, ಹಮೀದ್ ಶೇಕಮಲೆ, ಅಮೀನ್ ಕುಂಬ್ರ, ಯೂಸುಫ್ ಮುಡಾಲ, ಹಾಫಿಲ್ ಮುಹಮ್ಮದ್ ಹಾಶಿರ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-51-1295024190

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.