ಪುತ್ತೂರು: ಇಬ್ಬರು ಮಹಿಳೆಯರೊಂದಿಗೆ ಬಂದ ಮೂವರ ತಂಡ ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಮಳಿಗೆಯೊಂದರಿಂದ ಸುಮಾರು ₹ 3 ಲಕ್ಷ ಮೌಲ್ಯದ ಚಿನ್ನದ ಬಳೆ ಕಳವು ಮಾಡಿದ ಘಟನೆ ಪುತ್ತೂರು ನಗರದಲ್ಲಿ ನಡೆದಿದೆ.

ನಗರದ ಹೆಗ್ಡೆ ಆರ್ಕೇಡ್ನಲ್ಲಿರುವ ‘ಆರ್.ಕೆ.ಜ್ಯುವೆಲ್ಲರ್ಸ್’ ಚಿನ್ನಾಭರಣ ಮಳಿಗೆಯಲ್ಲಿ ಕಳವು ನಡೆದಿದೆ. ಘಟನೆಗೆ ಸಂಬಂಧಿಸಿ ಮಳಿಗೆಯ ಮಾಲೀಕ ಕೃಷ್ಣತ್ ನಾಮದೇವ್ ಸುರ್ವೆ ಅವರು ಪುತ್ತೂರು ನಗರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.

ಮಾರ್ಚ್ 30ರಂದು ವಿವಿಧ ವಿನ್ಯಾಸದ ಆಭರಣಗಳನ್ನು ತೋರಿಸುವಂತೆ ಮೂವರು ಅಪರಿಚಿತರು ಹೇಳಿದ್ದರು. ಅವರು ತಿಳಿಸಿದಂತೆ ಹಲವು ವಿನ್ಯಾಸದ ಬೇರೆ ಬೇರೆ ಚಿನ್ನದ ಬಳೆಗಳನ್ನು ತೋರಿಸಲಾಗಿತ್ತು. ಗ್ರಾಹಕರ ಸೋಗಿನಲ್ಲಿ ಬಂದಿದ್ದ ಅವರು ಆಭರಣ ಖರೀದಿಸದೆ ತೆರಳಿದ್ದರು. ಆ ಬಳಿಕ ಪರಿಶೀಲಿಸಿದಾಗ ಅಂದಾಜು 23 ಗ್ರಾಂ ತೂಕದ ಚಿನ್ನದ ಬಳೆಯೊಂದು ಕಳವಾಗಿರುವುದು ಗೊತ್ತಾಗಿದೆ ಎಂದು ಕೃಷ್ಣತ್ ನಾಮದೇವ್ ಸುರ್ವೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪುತ್ತೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-29-6850539

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.