ಪುತ್ತೂರು: ಇಲ್ಲಿನ ಮಹಾಲಿಂಗೇಶ್ವರ ದೇವಳದಿಂದ ದೇವರು ಭಾನುವಾರ ಮುಂಜಾನೆ ವೀರಮಂಗಲ ತಲುಪಿದ್ದು, ವೀರಮಂಗಲದ ಕುಮಾರಧಾರಾ ಹೊಳೆಯಲ್ಲಿ ಅವಭೃತ ಸ್ನಾನ ನಡೆಯಿತು. ಮರಳಿ ದೇವರು ದೇವಳಕ್ಕೆ ಹಿಂತಿರುಗಿ ಬಂದ ಬಳಿಕ ಧ್ವಜಾವರೋಹಣದೊಂದಿಗೆ ವಾರ್ಷಿಕ ಜಾತ್ರೋತ್ಸವ ಸಂಪನ್ನಗೊಂಡಿತು.

ಅವಭೃತ ಸ್ನಾನಕ್ಕೆ ಹೊರಟ ದೇವರಿಗೆ ದಾರಿಯುದ್ದಕ್ಕೂ ಇರುವ 57 ಕಟ್ಟೆಗಳಲ್ಲಿ ಕಟ್ಟೆಪೂಜೆ ನಡೆಸಲಾಯಿತು. ದಾರಿಯುದ್ದಕ್ಕೂ ಇರುವ ಅಂಗಡಿ ಮಳಿಗೆ ಮಾಲೀಕರು ಹಾಗೂ ನಿವಾಸಿಗಳು ದೇವರಿಗೆ ಆರತಿ ಬೆಳಗಿ ಹಣ್ಣುಕಾಯಿ ಸಮರ್ಪಣೆ ಮಾಡಿದರು. ಭಾನುವಾರ ಮುಂಜಾನೆ 6.15ರ ವೇಳೆಗೆ ವೀರಮಂಗಲದ ವಿಷ್ಣುಮೂರ್ತಿ ದೇವಸ್ಥಾನಕ್ಕೆ ತಲುಪಿದ ದೇವರಿಗೆ ಅಲ್ಲಿ ಕಟ್ಟೆಪೂಜೆ ನಡೆಯಿತು. ಬಳಿಕ ಕುಮಾರಧಾರ ನದಿ ತಟದ ಕಟ್ಟೆಯಲ್ಲಿ ಪುಷ್ಪಕನ್ನಡಿ ತೆರವು ಮಾಡಿದ ಬಳಿಕ ದೇವರು ಅವಭೃತ ಸ್ನಾನಕ್ಕೆ ನದಿಗೆ ಇಳಿಯಿತು.

ಕುಂಟಾರು ಶ್ರೀಧರ ತಂತ್ರಿ ಅವರ ನೇತೃತ್ವದಲ್ಲಿ ದೇವಳದ ಪ್ರಧಾನ ಅರ್ಚಕರು ಮತ್ತು ವೈದಿಕರು ಮಂತ್ರ ಘೋಷದೊಂದಿಗೆ ದೇವರಿಗೆ ವಿವಿಧ ಸುಗಂಧ ದ್ರವ್ಯಗಳಿಂದ ಅಭಿಷೇಕ ಸ್ನಾನ ಮಾಡಿಸಿದರು. ದೇವರ ಜತೆ ತೆರಳಿದ ಭಕ್ತರು ದೇವರ ಜಳಕದ ಬಳಿಕ ತಾವೂ ಸ್ನಾನ ಮಾಡಿ ಪುನೀತರಾದರು. ಬಳಿಕ ಅಲ್ಲಿಂದ ದೇವರು ನೇರವಾಗಿ ದೇವಳಕ್ಕೆ ಹಿಂತಿರುಗಿ ಬಂದ ನಂತರ ಧ್ವಜಾವರೋಹಣ ನಡೆಯಿತು.

ಈ ವೇಳೆ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಸಹಿತ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-29-1034238993

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.