ಪುತ್ತೂರು (ದಕ್ಷಿಣ ಕನ್ನಡ): ಫೋನ್ ಕರೆ ಸಂಭಾಷಣೆ ವೇಳೆ ರಂಗಭೂಮಿ, ತುಳುಚಿತ್ರ ಕಲಾವಿದರೊಬ್ಬರ ಬಗ್ಗೆ ಕೀಳು ಮಟ್ಟದ ಶಬ್ಧಗಳಿಂದ ನಿಂದಿಸಿ, ಬೆದರಿಕೆಯೊಡ್ಡಿದ ಆರೋಪದಡಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಸಮೀಪದ ಮಂದಾರ ನಿವಾಸಿ, ರಂಗಭೂಮಿ ಕಲಾವಿದ ಸುಂದರ ರೈ ಅವರು ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.

‘ಸ್ನೇಹಿತ ದಿನೇಶ್ ಕೊಡಪದವು ಅವರು ವಾಟ್ಸ್ ಆ್ಯಪ್ ಮೂಲಕ ಕಳುಹಿಸಿದ ಧ್ವನಿ ಮುದ್ರಿಕೆಯನ್ನು ಏಪ್ರಿಲ್ 12ರಂದು ಕೇಳಿದ್ದು, ಅದರಲ್ಲಿ ಗುರುವಾಯನಕೆರೆ ಪ್ರಜ್ವಲ್ ಹಾಗೂ ಮಹೇಶ್ ಶೆಟ್ಟಿ ನಡುವಿನ ಫೋನ್ ಸಂಭಾಷಣೆ ಅದಾಗಿದೆ. ಈ ಸಂಭಾಷಣೆಯಲ್ಲಿ ಮಹೇಶ್ ಶೆಟ್ಟಿ ಅವರು ದಿನೇಶ್ ಕೊಡಪದವು ಹಾಗೂ ಮಂದಾರ ಸುಂದರ್ ರೈ ಹೆಸರು ಪ್ರಸ್ತಾಪಿಸಿ ಕೀಳು ಮಟ್ಟದ ಪದಗಳಿಂದ ನಿಂದಿಸಿ ಅವಹೇಳನ ಮಾಡಿ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಅಲ್ಲದೇ ತನ್ನ ತಾಯಿ-ಪತ್ನಿಯ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಕೆಟ್ಟದಾಗಿ ಮಾತನಾಡಿ ತೇಜೋವಧೆ ಮಾಡಿದ್ದಾರೆ. ನನ್ನ ಹೆಸರು ಉಲ್ಲೇಖಿಸಿ ಜೀವ ಬೆದರಿಕೆಯೊಡ್ಡಿದ್ದಾರೆ. ಅಲ್ಲದೇ ಜಾತಿ ವೈಷಮ್ಯ, ಸಮಾಜದ ಶಾಂತಿ ನೆಮ್ಮದಿಗೆ ಭಂಗ ತರುವಂತೆ ಕುಮ್ಮಕ್ಕು ನೀಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-29-1070535674

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.