ಪುತ್ತೂರು: ‘ ಶಾಸಕ ಅಶೋಕ್ಕುಮಾರ್ ರೈ ಅವರ ತಪ್ಪು ಹುಡುಕಲು ವಿಫಲವಾಗಿರುವ ಬಿಜೆಪಿ ನಾಯಕರು, ಈಗ ಮಹಿಳಾ ಮೋರ್ಚಾವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡಿದ್ದಾರೆ. ಶಾಸಕರ ವಿರುದ್ಧ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಗೆ ಮಹಿಳಾ ಮೋರ್ಚಾ ಮುಂದಾದರೆ, ನಾವು ಕೂಡ ಮಹಿಳಾ ಸಮಾವೇಶ ಮಾಡಲು ಸಿದ್ಧರಿದ್ದೇವೆ’ ಎಂದು ಗ್ರಾಮಾಂತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್, ಉಸ್ತುವಾರಿ ಅನಿತಾ ಹೇಮನಾಥ್ ಶೆಟ್ಟಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಷಾ ಅಂಚನ್, ‘ನೀವು ಶಾಸಕರ ಮನೆ ಮುಂದೆ ಪ್ರತಿಭಟನೆ ಮಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ. ಶಾಸಕರ ವಿರುದ್ಧ ಭಾಷಣ ಮಾಡಲು ಪುತ್ತೂರಿನ ಮಹಿಳಾ ನಾಯಕರು ಸಿಗದ ಕಾರಣ ಮಂಗಳೂರಿನಿಂದ ಕರೆತಂದು ಭಾಷಣ ಮಾಡಿಸಿದ್ದಾರೆ’ ಎಂದರು.

ಅಶೋಕ್ಕುಮಾರ್ ರೈ ಅವರ ಸಾಧನೆ ಮತ್ತು ಬಿಜೆಪಿಯ ಸಂಜೀವ ಮಠಂದೂರು ಅವರ ಸಾಧನೆ ಏನೆಂಬುದನ್ನು ಬಹಿರಂಗ ಚರ್ಚೆಗೆ ಬರಲಿ. ಮಹಿಳಾ ಕಾಲೇಜಿನ ಪ್ರಾಂಶುಪಾಲರು ಕಾನೂನು ಮೀರಿ ವರ್ತಿಸಿದ ಕಾರಣ ಅಮಾನತಾಗಿದ್ದಾರೆ. ಅಧಿಕಾರಿಗಳು ತಪ್ಪು ಮಾಡಿದಾಗ ಇದು ಸಹಜ ಪ್ರಕ್ರಿಯೆ. ಇದು ದಬ್ಬಾಳಿಕೆ ಅಲ್ಲ, ಮಹಿಳೆ ಎಂಬ ಕಾರಣಕ್ಕೆ ಅವರು ಅಮಾನತಾಗಿದ್ದಲ್ಲ ಎಂದರು.

ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ, ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡಲು ಬಿಜೆಪಿಗರೇ ಕುಮ್ಮಕ್ಕು ನೀಡಿದ್ದರು. ಕಾಲೇಜಿನ ದೂಳಿನ ಸಮಸ್ಯೆ ಬಗ್ಗೆ ಪ್ರಾಂಶುಪಾಲರು ಶಾಸಕರಿಗಾಗಲಿ ಇಲಾಖೆಗಾಗಲಿ ಮಾಹಿತಿ ನೀಡಿಲ್ಲ. ನೇರವಾಗಿ ವಿದ್ಯಾರ್ಥಿನಿಯರನ್ನು ಬೀದಿಯಲ್ಲಿ ತಂದು ಕೂರಿಸಿದ್ದಲ್ಲದೆ, ಶಾಸಕರು ಪ್ರಶ್ನಿಸಿದಾಗ ಉಡಾಫೆಯ ಉತ್ತರ ನೀಡಿದ್ದಾರೆ. ಸಮಸ್ಯೆಯ ಬಗ್ಗೆ ಶಾಸಕರಿಗೆ ಹೇಳಿಯೂ ಅವರು ಕ್ರಮ ಕೈಗೊಳ್ಳದಿರುತ್ತಿದ್ದರೆ, ಆಗ ಶಾಸಕರನ್ನು ದೂರಬಹುದಿತ್ತು ಎಂದು ಹೇಳಿದರು.

ಪುತ್ತೂರು ಮಹಿಳಾ ಕಾಂಗ್ರೆಸ್ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ, ಪ್ರಧಾನ ಕಾರ್ಯದರ್ಶಿ ಅನಿ ಮಿನೇಜಸ್, ಪುತ್ತೂರು ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಪಕ್ಷದ ನಾಯಕಿ ಜಯಂತಿ ಪಟ್ಟುಮೂಲೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260305-29-1958148439

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.