ಪುತ್ತೂರು: ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 4 ಮಸೀದಿ ಹಾಗೂ ಮದ್ರಸಗಳ ನವೀಕರಣ, ದುರಸ್ತಿಗೆ ವಕ್ಫ್ ಇಲಾಖೆಯಿಂದ ₹75 ಲಕ್ಷ ಅನುದಾನ ಮಂಜೂರಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಬೆಟ್ಟಂಪಾಡಿ ಗ್ರಾಮದ ರೆಂಜ ಫಾರೂಕ್ ಜುಮಾ ಮಸೀದಿ ಹಾಗೂ ಖುವ್ವತ್ತುಲ್ ಇಸ್ಲಾಂ ಮದ್ರಸದ ಅಭಿವೃದ್ಧಿ ಕಾಮಗಾರಿಗೆ ₹20 ಲಕ್ಷ, ಬಜತ್ತೂರು ಗ್ರಾಮದ ಹಳೆನೇರಂಕಿ ಮುಹಿಯುದ್ದೀನ್ ಜುಮಾ ಮಸೀದಿ ದುರಸ್ತಿ, ನವೀಕರಣಕ್ಕೆ ₹15 ಲಕ್ಷ, ಶಾಂತಿಗೋಡು ಗ್ರಾಮದ ವೀರಮಂಗಲ ಬದ್ರಿಯಾ ಜುಮಾ ಮಸೀದಿಯ ದುರಸ್ತಿ ಮತ್ತು ನವೀಕರಣಕ್ಕೆ ₹15 ಲಕ್ಷ, ಪುತ್ತೂರು ಅನ್ಸರುದ್ದೀನ್ ಜಮಾಅತ್ ಕಮಿಟಿಯ ಅಧೀನದಲ್ಲಿರುವ ಸಾಲ್ಮರ ಸಯ್ಯದ್ ಮಲೆ ಜುಮಾ ಮಸೀದಿ, ಮಿಸ್ಬಾಹುಲ್ ಹುದಾ ಮದ್ರಸ ಕಟ್ಟಡ ದುರಸ್ತಿಗೆ ₹25 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದ್ದಾರೆ.

‘ಈ ನಾಲ್ಕು ಮಸೀದಿಗಳ ಪ್ರಮುಖರು ಅನುದಾನ ಕೋರಿ ಅರ್ಜಿ ಸಲ್ಲಿಸಿದ್ದರು. ಅವರ ಬೇಡಿಕೆ ಈಡೇರಿಸುವ ಕೆಲಸ ಮಾಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-29-1284750639

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.