ಪುತ್ತೂರು: ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗದ ಅಡಿಯಲ್ಲಿ ನಂದಳಿಕೆ ಬಾಲಚಂದ್ರ ರಾವ್ ಅವರ ಮೊದಲ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ವಿಶೇಷ ಅಂಚೆ ಲಕೋಟೆಯನ್ನು ಗುರುವಾರ ಬಿಡುಗಡೆಗೊಳಿಸಲಾಯಿತು.

ನಂದಳಿಕೆ ಬಾಲಚಂದ್ರ ರಾವ್ ಅವರ ಸಾಮಾಜಿಕ ಅಭಿವೃದ್ಧಿ, ಕವಿ ಮುದ್ದಣನ ನೆನಪಲ್ಲಿ ಮಾಡಿದ ಸಾರಸ್ವತ ಸೇವೆಯ ನೆನಪಿನಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಅವರ ಪತ್ನಿ ಎನ್. ವಿಜಯಲಕ್ಷ್ಮಿ ಬಿ. ರಾವ್ ಪ್ರಾಯೋಜಕತ್ವದಲ್ಲಿ ಪುತ್ತೂರು ಅಂಚೆ ವಿಭಾಗದ ಸಹಯೋಗದಲ್ಲಿ ಬಿಡುಗಡೆಗೊಳಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸಾಹಿತಿ ಬಿ.ಎ. ವಿವೇಕ್ ರೈ, ಹರಿಕೃಷ್ಣ ಪುನರೂರು ಹಾಗೂ ಯಕ್ಷಗಾನ ವಿದ್ವಾಂಸ ಪ್ರೊ.ಪ್ರಭಾಕರ ಜೋಶಿ ಭಾಗವಹಿಸಿದ್ದರು. ಮಂಗಳೂರು ಆರ್.ಎಂ.ಎಸ್. ವಿಭಾಗೀಯ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಿತು.

ಅಂಚೆ ಇಲಾಖೆಯ ಅಧಿಕಾರಿಗಳಾದ ಮೆಲ್ವಿನ್ ಅರುಣ್ ಲೋಬೊ, ಚಂದ್ರ ನಾಯ್ಕ ಎಂ. ಇದ್ದರು. ಸೌಜನ್ಯ ರಾವ್ ನಂದಳಿಕೆ ಪ್ರಾರ್ಥನೆ ಹಾಡಿದರು. ಉದಯೇಶ್ ಕೆದಿಲಾಯ ಕಾರ್ಯಕ್ರಮ ನಿರೂಪಿಸಿದರು.

ಮಾರ್ಗಕ್ಕೆ ನಾಮಕರಣ: ನಂದಳಿಕೆ ಬಾಲಚಂದ್ರ ರಾವ್ ಅವರ ಕನಸಿನಂತೆ ನಂದಳಿಕೆ ಮಹಾಲಿಂಗೇಶ್ವರ ದೇವಸ್ಥಾನದಿಂದ ನಂದಳಿಕೆ ಆದಿಲಕ್ಷ್ಮಿ ದೇವಸ್ಥಾನದವರೆಗಿನ ಜಾಗವನ್ನು ಮಾರ್ಗಕ್ಕೆ ನೀಡಿದ್ದು, ಈ ಮಾರ್ಗಕ್ಕೆ ನಂದಳಿಕೆ ಮೂಡುಮನೆಯ ‘ಎನ್. ಸುಬ್ಬರಾವ್ - ಡಾ. ಎನ್.ವಿ. ರಾವ್ ಮಾರ್ಗ’ ಎಂದು ಹೆಸರಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ನಂದಳಿಕೆ ಬಾಲಚಂದ್ರ ರಾವ್ ಅವರ ಸವಿನೆನಪಿಗಾಗಿ ನಾಮಫಲಕ ಅನಾವರಣ ಮಾಡಲಾಯಿತು. ಎನ್. ಶ್ರೀಕಾಂತ ಭಟ್, ನಂದಳಿಕೆ ಚಾವಡಿ ಅರಮನೆಯ ಎನ್. ಸುಹಾಸ ಹೆಗ್ಡೆ ಹಾಗೂ ಎನ್. ಶೋಭಾ ಹೆಗ್ಡೆ ಅನಾವರಣಗೊಳಿಸಿದರು. ನಂದಳಿಕೆ ಮೂಡುಮನೆಯ ಕುಟುಂಬಸ್ಥರು, ಬಂಧು ಮಿತ್ರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-29-1825435679

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.