ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಯುವತಿ ಎಂದು ನಂಬಿಸಿರುವ ಅಪರಿಚಿತ ವ್ಯಕ್ತಿಯೊಬ್ಬ ಪುತ್ತೂರಿನ ವ್ಯಕ್ತಿಯೊಬ್ಬರಿಂದ ₹ 4.84 ಲಕ್ಷ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಕಳೆದ ಡಿಸೆಂಬರ್ನಲ್ಲಿ ಸ್ನಾಪ್ಚಾಟ್ನಲ್ಲಿ ಅನ್ನಪೂರ್ಣ ಗೌಡ (26) ಎಂಬ ಹೆಸರಿನಿಂದ ಪರಿಚಯಿಸಿಕೊಂಡ ವ್ಯಕ್ತಿಯು, ಯುವತಿಯ ಧ್ವನಿಯಲ್ಲೇ ಮಾತನಾಡಿ ವಿಶ್ವಾಸ ಗಿಟ್ಟಿಸಿಕೊಂಡಿದ್ದಾನೆ. ತಾನು ಬೆಂಗಳೂರಿನ ಹೆಸರಾಂತ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ ನಂಬಿಸಿ, ಆ ಬಳಿಕ ವಾಟ್ಸ್ಆ್ಯಪ್ ನಂಬರ್ ಕೂಡ ನೀಡಿ ಅದರ ಮೂಲಕ ಮಾತುಕತೆ-ಮೆಸೇಜ್ ವಿನಿಮಯ ನಡೆದು ಆತ್ಮೀಯತೆ ಬೆಳೆದಿದೆ. ವಿವಿಧ ಹಣಕಾಸಿನ ತೊಂದರೆಗಳ ನೆಪದಲ್ಲಿ ಕಳೆದ ಫೆಬ್ರುವರಿಯಿಂದ ಏಪ್ರಿಲ್ ಅವಧಿಯಲ್ಲಿ ₹ 4,84,203 ಪಡೆದುಕೊಂಡಿದ್ದಾನೆ.ಬಳಿಕದ ಬೆಳವಣಿಗೆಯಲ್ಲಿ ಸಂಶಯ ಗೊಂಡ ಪುತ್ತೂರಿನ ವ್ಯಕ್ತಿಯು ಹಣ ವರ್ಗಾವಣೆ ಮಾಡಿರುವ ಖಾತೆಯ ಬಗ್ಗೆ ತನ್ನ ಗೆಳೆಯರ ಬಳಿ ವಿಚಾರಿಸಿದಾಗ ವಂಚಿಸಿರುವುದು ಯುವತಿಯಲ್ಲ ಎಂಬ ವಿಚಾರ ಗೊತ್ತಾಗಿದೆ.

ಈ ವಿಷಯ ಗೊತ್ತಾದ ಬಳಿಕ ಅವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-29-1062529535

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.