ಪುತ್ತೂರು: ಸನಾತನ ಹಿಂದೂ ಧರ್ಮದ ಆಚರಣೆಯ ಜತೆಗೆ ರಕ್ಷಣೆಯೂ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಧರ್ಮಕ್ಕೆ ಬಲ ಇದೆ, ತನ್ನದೇ ಆದ ಮಹತ್ವ-ಅಸ್ತಿತ್ವವಿದೆ. ಧರ್ಮದ ವಿಚಾರಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯವಾಗಬೇಕು ಎಂದು ಶೃಂಗೇರಿ ಶಾರದಾ ಪೀಠದ ವಿಧು ಶೇಖರ ಭಾರತಿ ಸ್ವಾಮೀಜಿ ಹೇಳಿದರು.

ಪುತ್ತೂರು ತಾಲ್ಲೂಕಿನ ಹನುಮಗಿ ರಿಯ ಕೋದಂಡರಾಮ-ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಮತ್ತು ಅಮರಗಿರಿಗೆ ಈಚೆಗೆ ಭೇಟಿ ನೀಡಿದ ಅವರು ಧರ್ಮ ಸಂದೇಶ ನೀಡಿದರು.

ಕುಂಟಾರು ರವೀಶ್ ತಂತ್ರಿ ಭಾಗವಹಿಸಿದ್ದರು. ಧರ್ಮಶ್ರೀ ಪ್ರತಿಷ್ಠಾನದ ಮಹಾಪೋಷಕ ಜಿ.ಕೆ.ಮಹಾಬಲೇಶ್ವರ ಭಟ್, ನಾರಾಯಣಿ ದಂಪತಿ ಸ್ವಾಮೀಜಿಗೆ ಫಲಪುಷ್ಪ ನೀಡಿ ಗೌರವಿಸಿದರು. ವಕೀಲ ಮಹೇಶ್ ಕಜೆ ನಿರೂಪಿಸಿದರು.

ಅಮರಗಿರಿಗೆ ಭೇಟಿ ನೀಡಿದ ಸ್ವಾಮೀಜಿ, ಮಾಜಿ ಸೈನಿಕ ಪ್ರವೀಣ್ ನೀರಳಿಕೆ ನೀಡಿದ ರಾಷ್ಟ್ರಧ್ವಜವನ್ನು ಅಮರಗಿರಿಯ ಯೋಧನ ಸ್ಮಾರಕದಲ್ಲಿ ಅನಾವರಣಗೊಳಿಸಿದರು. ಕೋದಂಡರಾಮ ಮತ್ತು ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಪೂಜೆ ನೆರವೇರಿಸಿದರು. ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ಮಾಹಿತಿ ನೀಡಿದರು.

ಕ್ಷೇತ್ರದ ಧರ್ಮದರ್ಶಿಗಳಾದ ಶಿವರಾಮ್ ಪಿ., ಶಿವರಾಮ್ ಶರ್ಮ ಕತ್ರಿಬೈಲು, ಪ್ರಮುಖರಾದ ಶ್ರೀಕೃಷ್ಣ ಭಟ್ ಮುಂಡ್ಯ, ನಾಗಪ್ಪ ಗೌಡ ಬೊಮ್ಮೆಟ್ಟಿ, ಸೀತಾರಾಮ ರೈ ಕೆದಂಬಾಡಿಗುತ್ತು, ಆರ್.ಸಿ.ನಾರಾಯಣ ರೆಂಜ, ನಹುಷ ಪಳನೀರು, ರವಿಕಿರಣ್ ಶೆಟ್ಟಿ ಬೆದ್ರಾಡಿ, ಸವಿತಾ ರೈ ನೆಲ್ಲಿತ್ತಡ್ಕ, ಆನಂದ ರೈ ಸಾಂತ್ಯ, ರಾಮಣ್ಣ ನಾಯ್ಕ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-29-594028382

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.