ಭಾನುವಾರ, ಆಗಸ್ಟ್ 18, 2019
23 °C

ಬಿರುಕುಬಿಟ್ಟ ತೆಂಕಿಲ ಗುಡ್ಡೆ ಭೂಕಂಪನದ ಸೂಚನೆ

Published:
Updated:

ಪುತ್ತೂರು: ತೆಂಕಿಲ ದರ್ಖಾಸು ಬಳಿಯ ಗೇರು ಅಭಿವೃದ್ಧಿ ನಿಗಮದ ಗೇರು ತೋಟದ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸೋಮವಾರ ಮಧ್ಯಾಹ್ನ ಭೂವಿಜ್ಞಾನ ಇಲಾಖೆಯ ಪ್ರಭಾರ ಉಪನಿರ್ದೇಶಕಿ ಪದ್ಮಶ್ರೀ, ಅಂತರ್ಜಲ ಪರಿಶೋಧಕಿ ವಸುಧಾ ಪರಿಶೀಲನೆ ನಡೆಸಿದ್ದಾರೆ.

‘ಗುಡ್ಡದಲ್ಲಿ ಭೂಕಂಪನ ಸಂಭವಿಸುವ ಸಾಧ್ಯತೆ ಹೆಚ್ಚು ಇದೆ’ ಎಂದು ಅಪಾಯದ ಸೂಚನೆಯನ್ನು ಅವರು ನೀಡಿದ್ದಾರೆ.

ಗುಡ್ಡದ ತಪ್ಪಲು ಪ್ರದೇಶದ ಮಧ್ಯಭಾಗದಲ್ಲಿ ಸುಮಾರು 200 ಮೀಟರ್ ಉದ್ದದಲ್ಲಿ ಭೂಮಿ ಬಿರುಕು ಬಿಟ್ಟಿದೆ. ಅಲ್ಲದೆ ಮೇಲಿನ ಭಾಗದಲ್ಲಿಯೂ ಅಡ್ಡ ಮತ್ತು ನೇರವಾಗಿ ಬಿರುಕು ಬಿಟ್ಟಿತ್ತು. ಅಲ್ಲಿನ ಮೊಗೇರ್ಕಳ ಗರಡಿಯ ಬಳಿ ಮಣ್ಣಿನ ಅಡಿಭಾಗದಿಂದ ಮಣ್ಣುಮಿಶ್ರಿತ ನೀರು ಮೇಲೆದ್ದು, ಕೆಳಭಾಗಕ್ಕೆ ಹರಿದು ಹೋಗುತ್ತಿದ್ದು, ಇಲ್ಲಿನ ಸ್ಥಿತಿಯು ಮಡಿಕೇರಿ ದುರಂತವನ್ನು ನೆನಪು ಮಾಡುವಂತೆ ಇರುವುದು ಭೀತಿ ಮೂಡಿಸಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಸಮೀಪದಲ್ಲಿ 25ಕ್ಕೂ ಅಧಿಕ ಮನೆಗಳಿವೆ. ಪುತ್ತೂರು ತಹಶೀಲ್ದಾರ್ ಅನಂತ ಶಂಕರ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

Post Comments (+)