ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಪ್ರಶ್ನೆ: ಶ್ರೀಕೃಷ್ಣ, ಸ್ವಸ್ತಿಕ್ ಪ್ರಥಮ

Last Updated 18 ಮಾರ್ಚ್ 2022, 16:10 IST
ಅಕ್ಷರ ಗಾತ್ರ

ಮಂಗಳೂರು: ನಗರದ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ‘ಅಲ್ ಕ್ವೆಸ್ಟ್’ ರಾಷ್ಟ್ರ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಿಟ್ಟೆ ಕಾರ್ಕಳದ ಎನ್‌ಎಂಎಎಂಐಟಿ ಕಾಲೇಜಿನ ಶ್ರೀಕೃಷ್ಣ ಮತ್ತು ಸ್ವಸ್ತಿಕ್‌ ಪ್ರಥಮ ಸ್ಥಾನದೊಂದಿಗೆ ₹ 30 ಸಾವಿರ ಬಹುಮಾನ ಪಡೆದರು.

ಸೇಂಟ್ ಅಲೋಶಿಯಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಸಮರ್ಥ್ ಮತ್ತು ಸಂಕಿತ್ ದ್ವಿತೀಯ ಸ್ಥಾನದೊಂದಿಗೆ ₹ 20 ಸಾವಿರ ನಗದು, ಮಂಗಳೂರಿನ ಕೆನರಾ ಕಾಲೇಜಿನ ನೀಲ್ ಮತ್ತು ಶ್ರೀಹರಿ ತೃತೀಯ ಸ್ಥಾನದೊಂದಿಗೆ ₹ 10 ಸಾವಿರ ಬಹುಮಾನ ಪಡೆದರು.

ಇವುಗಳ ಜತೆಗೆ ಕೆನರಾ ಕಾಲೇಜು, ತ್ರಿಶಾ ಕಾಲೇಜು ಮತ್ತು ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಕಾಮರ್ಸ್ ವಿದ್ಯಾರ್ಥಿಗಳು ಅಂತಿಮ ಸುತ್ತಿಗೆ ಪ್ರವೇಶ ಪಡೆದಿದ್ದವು. ಒಟ್ಟು 85 ತಂಡಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಲಿಖಿತ ಪರೀಕ್ಷೆ ನಡೆಸಿ, ಅಂತವಾಗಿ ಆರು ತಂಡಗಳನ್ನು ಆಯ್ಕೆ ಮಾಡಲಾಗಿತ್ತು.

ಸೇಂಟ್ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಫಾದರ್ ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ, ಕ್ವಿಜ್ ಮಾಸ್ಟರ್ ಗೌರವ್ ಯಾದವ್, ಮೈಸೂರು ಕಾಲೇಜಿನ ಡಿ. ಪೌಲ್, ಹಳೇ ವಿದ್ಯಾರ್ಥಿ ಅಮಿತ್ ಪ್ರಭು ಕಾರ್ಯಕ್ರಮ ಉದ್ಘಾಟಿಸಿದರು. ರಸಪ್ರಶ್ನೆ ಸ್ಪರ್ಧೆಯು ಐದು ಸುತ್ತಿನಲ್ಲಿ ನಡೆಯಿತು. ಸ್ಪರ್ಧಿಗಳಿಗೆ ಉತ್ತರಿಸಲಾಗದ ಪ್ರಶ್ನೆಗಳನ್ನು ಪ್ರೇಕ್ಷಕರಿಗೆ ರವಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT