ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ಗಾಂಧಿ ಪಾರ್ಟ್ ಟೈಂ ರಾಜಕಾರಣಿ; ಬಿ.ಎಲ್. ಸಂತೋಷ

Last Updated 13 ನವೆಂಬರ್ 2021, 10:39 IST
ಅಕ್ಷರ ಗಾತ್ರ

ಮಂಗಳೂರು: ರಾಹುಲ್ ಗಾಂಧಿ ಪಾರ್ಟ್ ಟೈಂ ರಾಜಕಾರಣಿ. ಅವರಿಗೆ ರಾಜಕೀಯದ ಯಾವುದೇ ಅನುಭವ ಇಲ್ಲ. ಆದರೆ, ಅವರು ಎಲ್ಲಿಯೋ ಕುಳಿತು ಟ್ವೀಟ್ ಮಾಡ್ತಾರೆ. ಅದು ಎಲ್ಲಿಂದ ಎಂದು ಗೊತ್ತಾಗಲ್ಲ. ಕಾಂಗ್ರೆಸ್ ಚಿಂತನೆಗಳನ್ನು ಮುಕ್ತ ಮಾಡುವ ಮೂಲಕ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ನಮ್ಮ ಗುರಿಯೇ ಹೊರತು, ಕಾಂಗ್ರೆಸ್ ಪಕ್ಷವನ್ನು ಮುಕ್ತ ಮಾಡುವುದಲ್ಲ. ಸಮರ್ಥವಾದ ವಿರೋಧ ಪಕ್ಷ ಇದ್ದಾಗಲೇ ಆಡಳಿತ ನಡೆಸೋದು ಸುಲಭ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಹೇಳಿದರು.

ಮಂಗಳೂರಿನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಶನಿವಾರ ಬಿಜೆಪಿ ರಾಜ್ಯ ಪ್ರಕೋಷ್ಟಗಳ ಚಿಂತನ ವರ್ಗದ ಸಮಾರೋಪದಲ್ಲಿ ಮಾತನಾಡಿದರು.

ಕಾಂಗ್ರೆಸ್‌ ಮುಖಂಡರಿಗೆ ಮೋದಿ ಅವರನ್ನು ಬೈದರೆ ಮಾತ್ರ ಪತ್ರಿಕೆಗಳ ಮುಖ ಪುಟದಲ್ಲಿ ಬರುತ್ತೇವೆ ಎಂಬ ಭಾವನೆ ಇದೆ. ಹಾಗಾಗಿ ಅವರು ಈ ರೀತಿ ಮಾತನಾಡುವ ಮನಸ್ಥಿತಿಗೆ ಬಂದಿದ್ದಾರೆ. ವೈಚಾರಿಕ ಆಂದೋಲನದ ಮೂಲಕ ಕಾಂಗ್ರೆಸ್ ಚಿಂತನೆಗಳನ್ನು ಮುಕ್ತ ಮಾಡುವ ಮಹತ್ವದ ಕಾರ್ಯಕ್ಕೆ ನಾವು ಸಿದ್ದರಾಗಬೇಕು ಎಂದು ಸಂತೋಷ ಹೇಳಿದರು.

ಗಾಂಧಿಯವರ ಹೆಸರನಲ್ಲಿ ಕಾಂಗ್ರೆಸ್ ಅಂಗಡಿ‌ ಹಾಕಿಕೊಂಡಿದೆ. ಈ ಅಂಗಡಿ ಪ್ರವೃತ್ತಿಯನ್ನು ಬಿಜೆಪಿಗೆ ಹೇಳುವುದಕ್ಕೆ ಅವರು ಬರುತ್ತಾರೆ. ಇದನ್ನು ನಾವು ಅವರಿಂದ ಕಲಿಯಬೇಕೆ? ಕೀಳುಮಟ್ಟದ ರಾಜಕೀಯ ಮಾಡುವುದನ್ನು ಕಾಂಗ್ರೆಸ್ ಮೊದಲು ಕೈಬಿಡಬೇಕು. ಪ್ರಬಲ ವಿರೋಧ ಪಕ್ಷ ಇದ್ದಾಗಲೇ ಆಡಳಿತ ವ್ಯವಸ್ಥೆ ಉತ್ತಮವಾಗಿ‌ ಸಾಗುತ್ತದೆ. ಆದರೆ ಕಾಂಗ್ರೆಸ್ ನಾಯಕರು ಪುಡಾರಿಗಳಂತೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.

ಜನರ ನಂಬಿಕೆಯನ್ನು ಕಾಂಗ್ರಸ್ ಕಳೆದುಕೊಂಡಿದೆ. ವಿಶ್ವಾಸಾರ್ಹತೆಯಿಂದ ದೂರವಾಗಿದೆ. ನಂಬಿಕೆ ನಾಯಕತ್ವದ ಕೊರತೆ ಕಾಂಗ್ರೆಸ್‌ನಲ್ಲಿ ಎದ್ದು ಕಾಣುತ್ತದೆ. ಜಾತಿಯ ವಿಷ ಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮೊದಲು ನಿಲ್ಲಿಸಬೇಕು. ಚುನಾವಣೆ ಬಂದಾಗ ಸಂಘವನ್ನು ಬೈಯುವ , ಟೀಕೆ ಮಾಡುವ ಚಟ ಕಾಂಗ್ರೆಸ್ ನಾಯಕರ ಮನಸ್ಥಿತಿಯನ್ನು ಬಿಂಬಿಸುತ್ತದೆ. ಇದನ್ನು ನಾವು ಕಿತ್ತು ಹಾಕುವ ಕೆಲಸ ಮಾಡುತ್ತೇವೆ ಎಂದರು.

50 ವರ್ಷಗಳಿಂದ ರಾಜಕಾರಣದಲ್ಲಿ ಇರುವವರ ಬಗ್ಗೆ ಸರಿಯಾಗಿ ಟೀಕೆ ಮಾಡುವ ಬದಲು, ಪುಡಾರಿಗಳಂತೆ ಮಾತನಾಡುವ ರಾಜಕೀಯ ನೆಲೆ ಸರಿಯಾದ ಕ್ರಮವಲ್ಲ. ವೈಚಾರಿಕ ನೆಲೆಯ ರಾಜಕಾರಣ ಮುಖ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಕೋಟ, ಅಂಗಾರ, ಸುದರ್ಶನ ಮೂಡುಬಿದಿರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT