ಮುಂದುವರಿದ ಮಳೆ: ಕುಕ್ಕೆ ಜಲಾವೃತ, ಸುಳ್ಯ, ಬಂಟ್ವಾಳದಲ್ಲಿ ಶಾಲೆಗಳಿಗೆ ರಜೆ

7

ಮುಂದುವರಿದ ಮಳೆ: ಕುಕ್ಕೆ ಜಲಾವೃತ, ಸುಳ್ಯ, ಬಂಟ್ವಾಳದಲ್ಲಿ ಶಾಲೆಗಳಿಗೆ ರಜೆ

Published:
Updated:

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರವೂ ಮಳೆಯ ಅಬ್ಬರ ಮುಂದುವರಿದಿದೆ. ಸುಳ್ಯ, ಬಂಟ್ವಾಳ ತಾಲ್ಲೂಕಿನಲ್ಲಿ ಎಲ್ಲ ಶಾಲೆ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

‌ಸುಬ್ರಹ್ಮಣ್ಯ ಕುಲ್ಕುಂದ ಕುದುರೆಮಜಲು ಎಂಬಲ್ಲಿ ಸುಮಾರು 15 ಕುಟುಂಬಗಳ ಮನೆ ಮುಳುಗಡೆಯಾಗಿದ್ದು, ಮಧ್ಯರಾತ್ರಿ ಅಧಿಕಾರಿಗಳು ಧಾವಿಸಿ ಅವರನ್ನು ಸಮೀಪದ ಶಾಲೆಗೆ ಸ್ಥಳಾಂತರಿಸಿ ಆಶ್ರಯ ನೀಡಲಾಗಿದೆ.

ಭಯಂಕರ ಮಳೆಗೆ ಕುಕ್ಕೆ ಸುಬ್ರಹ್ಮಣ್ಯ ಸಂಪೂರ್ಣ ಜಲಾವೃತವಾಗಿದೆ. ಕುಮಾರಧಾರ, ದರ್ಪಣ ತೀರ್ಥ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಸುಬ್ರಹ್ಮಣ್ಯ ಪರಿಸರದ ಕಲ್ಮಕಾರು ಬಾಳುಗೋಡು ಗುತ್ತಿಗಾರು ಬಳ್ಪ ಏನೆಕಲ್ ಪಂಜ ಎಲ್ಲ ಕಡೆಗಳಲ್ಲಿ ಸೇತುವೆಗಳು ಮುಳುಗಡೆಯಾಗಿವೆ. ಕುಕ್ಕೆ ಸುಬ್ರಹ್ಮಣ್ಯದ ಸಂಪರ್ಕವೇ ಕಡಿತವಾಗಿದೆ.

ಸುಬ್ರಹ್ಮಣ್ಯ ಕುಲ್ಕುಂದ ಕುದುರೆಮಜಲು ಎಂಬಲ್ಲಿ ಸುಮಾರು 15 ಕುಟುಂಬಗಳ ಮನೆ ಮುಳುಗಡೆಯಾಗಿದ್ದು, ಮಧ್ಯರಾತ್ರಿ ಅಧಿಕಾರಿಗಳು ಧಾವಿಸಿ ಅವರನ್ನು ಸಮೀಪದ ಶಾಲೆಗೆ ಸ್ಥಳಾಂತರಿಸಿ ಆಶ್ರಯ ನೀಡಲಾಗಿದೆ.

ಬರಹ ಇಷ್ಟವಾಯಿತೆ?

  • 17

    Happy
  • 2

    Amused
  • 3

    Sad
  • 0

    Frustrated
  • 3

    Angry

Comments:

0 comments

Write the first review for this !