ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೇನೆಕಲ್ಲು: ತೋಟಕ್ಕೆ ನುಗ್ಗಿದ ನೀರು

ನಿರ್ಮಾಣ ಹಂತದ ಕಿಂಡಿ ಅಣೆಕಟ್ಟೆ: ರಸ್ತೆ ಸಂಪರ್ಕವೂ ಬಂದ್
Last Updated 4 ಜುಲೈ 2022, 13:15 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ನಿರ್ಮಾಣ ಹಂತದ ಕಿಂಡಿ ಅಣೆಕಟ್ಟೆಯಲ್ಲಿ ಮರದ ಗೆಲ್ಲು, ದಿಮ್ಮಿಗಳು ಸಿಲುಕಿಕೊಂಡು ಸಮೀಪದ ತೋಟ ಹಾಗೂ ರಸ್ತೆಗೆ ಮಳೆ ನೀರು ನುಗ್ಗಿದ್ದು ನಾಲ್ಕೂರು ಗ್ರಾಮದ ಮರಕತ ದೇವಸ್ಥಾನದ ಬಳಿಯ ಯೇನೆಕಲ್ಲು ಪರಿಸರದ 30 ಕುಟುಂಬಗಳು ಆತಂಕದಲ್ಲಿವೆ.

ಇಲ್ಲಿ ಹರಿಯುತ್ತಿರುವ ಹೊಳೆಗೆ ಕಿಂಡಿ ಅಣೆಕಟ್ಟು ಸಹಿತ ಸೇತುವೆ ನಿರ್ಮಾಣಗೊಳ್ಳುತ್ತಿದ್ದು, ಮಳೆಗೆ ಕಿಂಡಿ ಅಣೆಕಟ್ಟಿನ ಕಂಬದ (ಪಿಲ್ಲರ್‌) ನಡುವೆ ಮರ, ಗೆಲ್ಲು, ಕಸ ಸಂಗ್ರಹಗೊಂಡಿತ್ತು.

ಎರಡು ಮೂರು ದಿನಗಳಿಂದ ನೀರು ಸಮೀಪದ ಕೃಷಿಕರ ತೋಟದಲ್ಲಿ ನಿಂತಿದ್ದು, ಕೃಷಿ ಹಾನಿ ಭೀತಿ ಎದುರಾಗಿದೆ. ದೇವರಹಳ್ಳಿ- ಬೂದಿಪಳ್ಳ- ಯೇನೆಕಲ್ಲು ಸಂಪರ್ಕ ರಸ್ತೆಗೂ ನೀರು ನುಗ್ಗಿದ್ದು, ಸಂಪರ್ಕ ಕಡಿತಗೊಂಡಿದೆ.

ಕ್ರಮ:

ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿರುವ ಮರದ ಗೆಲ್ಲು, ದಿಮ್ಮಿಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಹಾಗೂ ಬೆಳೆ ಹಾನಿ ಬಗ್ಗೆ ಇಲಾಖೆಯಿಂದ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ವಿಭಾಗಾಧಿಕಾರಿ ಗಿರೀಶ್‌ ನಂದನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT