ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ, ಮಲೆನಾಡಿನ ಹಲವೆಡೆ ಮಳೆ; ಕೃಷಿಕರಿಗೆ ಕಂಟಕ

Last Updated 19 ಫೆಬ್ರುವರಿ 2021, 5:41 IST
ಅಕ್ಷರ ಗಾತ್ರ

ಮಂಗಳೂರು: ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ಮೋಡ ಕವಿದ ವಾತಾವರಣವಿದ್ದು, ಬೆಳ್ತಂಗಡಿ ತಾಲ್ಲೂಕಿನಲ್ಲಿ ಅರ್ಧ ಗಂಟೆ ಮಳೆ ಸುರಿದಿದೆ.

ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದಂತೆ ಶುಕ್ರವಾರ ಬೆಳಗ್ಗಿನ ಜಾವ 3.30ರಿಂದ 4 ಗಂಟೆವರೆಗೆ ಬೆಳ್ತಂಗಡಿ ತಾಲ್ಲೂಕಿನ ಹಲವೆಡೆ ಉತ್ತಮ ಮಳೆಯಾಗಿದೆ.

ರಾತ್ರಿ ‌ಸುಮಾರು ಅರ್ಧತಾಸು ಉತ್ತಮ ಮಳೆಯಾಗಿದ್ದು, ಬೆಳಿಗ್ಗೆ 8 ಗಂಟೆವರೆಗೂ ತುಂತುರು ಮಳೆ ಸುರಿದಿದೆ. ಸಂಪೂರ್ಣ ಮೋಡಕವಿದ ವಾತಾವರಣದಿಂದ ಕೂಡಿದೆ.

ಕೃಷಿಕರಿಗೆ ಮತ್ತೆ ಮಳೆ‌ಕಂಟಕವಾಗಿ ಪರಿಣಮಿಸಿದ್ದು, ಭತ್ತ, ಅಡಿಕೆ ಕೃಷಿಗೆ ಹಾನಿಯಾಗಿದೆ. ರಾತ್ರಿಯೇ ಏಕಾಏಕಿ ಮಳೆ ಸುರಿದಿದ್ದರಿಂದ ಒಣಹಾಕಿದ ಅಡಿಕೆಗಳು ಒದ್ದೆಯಾಗಿದೆ.

ಬೆಳ್ತಂಗಡಿ ತಾಲ್ಲೂಕಿನ ಉಜಿರೆ, ಚಾರ್ಮಾಡಿ, ಮುಂಡಾಜೆ, ಬೆಳ್ತಂಗಡಿ, ಧರ್ಮಸ್ಥಳ, ಕಲ್ಮಂಜ, ನಿಡ್ಲೆ, ಕಳೆಂಜ, ಬೆಳಾಲು, ಕಣಿಯೂರು ಸೇರಿದಂತೆ ಇತರೆಡೆ‌ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್‌ ಪುರ, ಕೊಟ್ಟಿಗೆಹಾರ, ಬಾಳೆಹೊನ್ನೂರು, ಕಡೂರು, ಕೊಪ್ಪದಲ್ಲೂ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT