ರಾಜೀವ್ ನಿಂದಕರನ್ನು ಕಾಂಗ್ರೆಸ್ ಸಹಿಸದು

ಶುಕ್ರವಾರ, ಜೂನ್ 21, 2019
22 °C
ರಾಜೀವ್ ಗಾಂಧಿ ಪುಣ್ಯತಿಥಿಯಲ್ಲಿ ಮಾಜಿ ಸಚಿವ ರಮಾನಾಥ ರೈ

ರಾಜೀವ್ ನಿಂದಕರನ್ನು ಕಾಂಗ್ರೆಸ್ ಸಹಿಸದು

Published:
Updated:
Prajavani

ಮಂಗಳೂರು: ಭಾರತವನ್ನು 21ನೇ ಶತಮಾನದತ್ತ ಕೊಂಡ್ಯೊಯುವ ನಿಟ್ಟಿನಲ್ಲಿ, ದೇಶದಲ್ಲಿ ದೂರದರ್ಶನ ಮತ್ತು ಕಂಪ್ಯೂಟರ್ ಕ್ರಾಂತಿಯನ್ನು ಆರಂಭಿಸಿದ ಮಹಾನ್ ನಾಯಕ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ದೂಷಣೆ ಮಾಡುವವರನ್ನು ಕಾಂಗ್ರೆಸ್ ಎಂದಿಗೂ ಸಹಿಸದು ಮತ್ತು ಕ್ಷಮಿಸದು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಜರುಗಿದ ರಾಜೀವ್ ಗಾಂಧಿಯವರ ಪುಣ್ಯತಿಥಿಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶವನ್ನು ಆಳುವವರು ಮತ್ತು ಕೆಲವು ಬಿಜೆಪಿ ಸಂಸದರು ರಾಜೀವ್ ಗಾಂಧಿ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿರುವುದು ದುರದೃಷ್ಟಕರ. 18 ವರ್ಷಕ್ಕೆ ಮತದಾನದ ಹಕ್ಕು ನೀಡುವ ಮೂಲಕ ಯುವ ಜನತೆಗೆ ಸ್ಫೂರ್ತಿ ತುಂಬಿದ ಅವರು, ಹಗರಣ ಮುಕ್ತರಾಗಿ ಪ್ರತಿಯೊಬ್ಬ ರಾಜಕಾರಣಿಗೂ ಮಾದರಿಯಾಗಿದ್ದರು ಎಂದು ಬಣ್ಣಿಸಿದರು.

ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಮಾತನಾಡಿ, ಇಂದಿನ ಸಾಮಾಜಿಕ ಜಾಲತಾಣ ಜನಪ್ರಿಯವಾಗಿದ್ದರೆ, ಅದು ರಾಜೀವ್ ಗಾಂಧಿಯವರು ದೇಶಕ್ಕೆ ನೀಡಿದ ದೊಡ್ಡ ಕೊಡುಗೆ. ಇಲ್ಲಿನ ಸಂಸದರು ತಿಳಿಗೇಡಿಯಾಗಿ ವರ್ತಿಸಿ, ರಾಜೀವರನ್ನು ನಿಂದಿಸಿರುವುದು ಅಕ್ಷಮ್ಯ ಅಪರಾಧ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಹರೀಶ್‌ಕುಮಾರ್ ಮಾತನಾಡಿ, ಚುನಾವಣೆಯಲ್ಲಿ ಶ್ರಮಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಮುಂಬರುವ ನಗರಸಭೆ, ಪುರಸಭೆಯ ಚುನಾವಣೆಗೆ ವೀಕ್ಷಕರನ್ನು ಪ್ರಕಟಿಸಿದರು. ಸಹಕರಿಸಿದ ವಿವಿಧ ಸಂಘಟನೆಗಳನ್ನು ಸ್ಮರಿಸಿದರು.

ಮುಖ್ಯ ಅತಿಥಿಯಾಗಿದ್ದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಮೈತ್ರಿ ಅಭ್ಯರ್ಥಿ ಮಿಥುನ್ ಎಂ.ರೈ ಮಾತನಾಡಿ, ರಾಜೀವ್ ಗಾಂಧಿಯವರನ್ನು ಕಳೆದುಕೊಂಡ ನಂತರ ದೇಶದಲ್ಲಿ ಅಭಿವೃದ್ಧಿಯ ವೇಗ ಕುಂಠಿತಗೊಂಡಿದೆ. ಡಿಜಿಟಲ್ ಇಂಡಿಯಾದ ನಿರ್ಮಾತೃ ಆಗಿರುವ ರಾಜೀವ್ ಗಾಂಧಿಯವರು ಯುವಕರ ಕಣ್ಮಣಿಯಾಗಿದ್ದಾರೆ ಎಂದರು.

ರಾಜೀವ್ ಗಾಂಧಿಯವರ ಭಾವಚಿತ್ರಕ್ಕೆ ನಾಯಕರು ಪುಷ್ಪಾರ್ಚನೆ ಮಾಡಿದರು. ಇದೇ ಸಂದರ್ಭದಲ್ಲಿ ಅಗಲಿದ ಕಾಂಗ್ರೆಸ್ ನಾಯಕರಾದ ಸಂಜೀವ ಮೊಯಿಲಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆಯ ಜನ್ಮದಿನವನ್ನು ಮಂಗಳೂರಿನಲ್ಲಿ ಆಚರಿಸಿದ ಹಿಂದೂ ಮಹಾಸಭಾದ ನಡೆಯನ್ನು ಸಭೆಯಲ್ಲಿ ಖಂಡಿಸಲಾಯಿತು. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ರಾಜಶೇಖರ್ ಕೋಟ್ಯಾನ್, ಎಂ.ಎಸ್ ಮಹಮ್ಮದ್, ನವೀನ್ ಡಿಸೋಜ, ಎಐಸಿಸಿ ಸದಸ್ಯೆ ಕವಿತಾ ಸನಿಲ್, ಇಬ್ರಾಹಿಂ ಕೋಡಿಜಾಲ್, ಎಂ.ಶಶಿಧರ್ ಹೆಗ್ಡೆ, ಸದಾಶಿವ ಉಳ್ಳಾಲ್, ಬ್ಲಾಕ್ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್, ಅಬ್ದುಲ್ ಸಲೀಂ ಜೆ., ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಬೇಬಿ ಕುಂದರ್ ಬಂಟ್ವಾಳ, ಸದಾಶಿವ ಶೆಟ್ಟಿ ಸುರತ್ಕಲ್, ಸುರೇಂದ್ರ ಬಿ.ಕಂಬಳಿ ಗುರುಪುರ, ಜಯಪ್ರಕಾಶ್ ರೈ ಸುಳ್ಯ, ಹಿಲ್ಡಾ ಆಳ್ವ, ಮಲಾರ್ ಮೋನು, ಮರಿಯಮ್ಮ ಥೋಮಸ್, ಸುರೇಶ್ ಬಲ್ಲಾಳ್, ಬಿ.ಎಂ ಅಬ್ಬಾಸ್ ಅಲಿ, ಎ.ಸಿ ವಿನಯರಾಜ್, ಕುಮಾರಿ ಅಪ್ಪಿ, ಆಶಾ ಡಿ’ಸಿಲ್ವಾ, ಶಾಹಿರ ಬಾನು, ಬಿ.ಜಿ ಸುವರ್ಣ, ಜಯಶೀಲಾ ಅಡ್ಯಂತಾಯ, ಎಚ್.ಕೆ. ಇಲ್ಯಾಸ್ ಕಡಬ, ಟಿ.ಕೆ. ಸುಧೀರ್, ಬಿ.ಎ. ಮಹಮ್ಮದ್ ಹನೀಫ್, ಪದ್ಮನಾಭ ಅಮೀನ್, ಯು.ಎಚ್. ಖಾಲಿದ್, ನಝೀರ್ ಬಜಾಲ್, ನೀರಜ್ ಪಾಲ್, ಪೀಯೂಸ್ ಮೊಂತೆರೋ, ನಾಗೇಶ್ ಭಂಡಾರಿ, ಯಾಕೂಬ್ ಪುತ್ತೂರು, ರಾಜಶೇಖರ್ ನಾಯಕ್, ಜೆಸಿಂತಾ ವಿಜಯ ಆಲ್ಫ್ರೇಡ್, ತೆರೆಜಾ ಪಿಂಟೋ, ಸ್ಟೀಫನ್ ಮರೋಳಿ, ರಮಾನಂದ ಪೂಜಾರಿ ಉಪಸ್ಥಿತರಿದ್ದರು. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಕೆ. ಶಾಹುಲ್ ಹಮೀದ್ ಸ್ವಾಗತಿಸಿ, ವಂದಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !