ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಟ್ವಾಳದಲ್ಲಿ ಅಕ್ರಮ ಗಣಿಗಾರಿಕೆ, ಜುಗಾರಿ ದಂಧೆ

ಎಎಸ್ಪಿ ಶಿವಾಂಶು ರಜಪೂತ್ ವರ್ಗಾವಣೆಯೇ ಸಾಕ್ಷಿ
Last Updated 7 ಜುಲೈ 2022, 4:45 IST
ಅಕ್ಷರ ಗಾತ್ರ

ಬಂಟ್ವಾಳ: ಬಂಟ್ವಾಳ ಮತ್ತು ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಮರಳು ಮತ್ತಿತರ ಅಕ್ರಮ ಗಣಿಗಾರಿಕೆ ಮತ್ತು ಜುಗಾರಿ ದಂಧೆ ವ್ಯಾಪಕವಾಗಿದ್ದು, ಇದನ್ನು ತಡೆಯಲು ಯತ್ನಿಸಿದ್ದ ಎಎಸ್ಪಿ ಶಿವಾಂಶು ರಜಪೂತ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ಜುಗಾರಿ ಅಡ್ಡೆ ಮತ್ತು ಕ್ಲಬ್ ಹಾವಳಿ ಪರಿಣಾಮದಿಂದ ಮಹಿಳೆಯರ ಮಾಂಗಲ್ಯ ಎಗರಿಸುವ ಪ್ರಕರಣ ಹೆಚ್ಚಳವಾಗಿದ್ದು, ಕ್ಲಬ್ ಪಕ್ಕದಲ್ಲೇ ಯುವಕನೊಬ್ಬನಿಗೆ ಚಾಕು ಇರಿತ ಪ್ರಕರಣವೂ ನಡೆದಿದೆ. ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ’ ಎಂದರು.

ಇಲ್ಲಿನ ಕಡೇಶಿವಾಲಯ ನೇತ್ರಾವತಿ ನದಿಯಿಂದ ಮರಳು ತೆಗೆಯಲು ಪರವಾನಗಿ ಪಡೆದು, ಮಣಿನಾಲ್ಕೂರು, ಸಾಲೆತ್ತೂರು, ಪೆರ್ನೆ, ಸೇರಾ ಮತ್ತಿತರ ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದೆ ಎಂದರು.

ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮತ್ತು ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಅಬ್ಬಾಸ್ ಆಲಿ, ಕೆ.ಪದ್ಮನಾಭ ರೈ, ಸುಭಾಶ್ಚಂದ್ರ ಶೆಟ್ಟಿ, ಉಮಾನಾಥ ಶೆಟ್ಟಿ, ಮುರಳೀಧರ ರೈ, ಮಹಮ್ಮದ್ ಬಡಗಬೆಳ್ಳೂರು, ಕೌಶಲ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT