ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್ಐಟಿಕೆ ಕಡಲ ಕಿನಾರೆಯಲ್ಲಿ ಯುವತಿ ಅತ್ಯಾಚಾರ: ಆರೋಪಿ ಬಂಧನ

Last Updated 1 ಆಗಸ್ಟ್ 2022, 7:56 IST
ಅಕ್ಷರ ಗಾತ್ರ

ಮಂಗಳೂರು:ಸುರತ್ಕಲ್ ಎನ್ಐಟಿಕೆ ಸಮೀಪದ ಕಡಲ ಕಿನಾರೆಯಲ್ಲಿ ಗೆಳೆಯನ ಜೊತೆ ವಿಹಾರಕ್ಕೆ ಬಂದಿದ್ದ ಯುವತಿ ಮೇಲೆ ಮೀನು ಸಾಗಣೆ ಲಾರಿಯ ಚಾಲಕನೊಬ್ಬ ಜುಲೈ 27 ರಂದು ಅತ್ಯಾಚಾರ ನಡೆಸಿದ್ದಾನೆ.

ಲೈಂಗಿಕ ಸಂಪರ್ಕ ನಡೆಸುವ ವಿಡಿಯೊವನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದ ಆರೋಪಿ, ಅದನ್ನು ತೋರಿಸಿ ಯುವತಿಯನ್ನು ಬೆದರಿಸಿದ್ದ.

ಆರೋಪಿಯನ್ನು ಮುನಾಝ್( 30) ಅಹಮದ್ ಎಂದು ಗುರುತಿಸಲಾಗಿದೆ. ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
'ಆರೋಪಿಯು ಇದೇ ರೀತಿ ಬೇರೆ ಯುವತಿಯರಿಗೂ ಕಿರುಕುಳ ನೀಡಿರುವ ಸಾಧ್ಯತೆ ಇದೆ. ಹಾಗಾಗಿ ಆರೋಪಿಯನ್ನು ನ್ಯಾಯಲಯಕ್ಕೆ ಹಾಜರುಪಡಿಸಿದ ಬಳಿಕ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದೇವೆ. ಆತನ ಮೊಬೈಲ್ ಗಳನ್ನೂ ವಶಕ್ಕೆ ಪಡೆದಿದ್ದೇವೆ' ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಯುವತಿಯು ಗೆಳೆಯನ ಜೊತೆ ಕಡಲ ಕಿನಾರೆಗೆ ತೆರಳಿದ್ದಳು. ಗೆಳೆಯನ ಜೊತೆ ಅನ್ಯೋನ್ಯವಾಗಿದ್ದ ದೃಶ್ಯವನ್ನು ಮೊದಲು ಸೆರೆ ಹಿಡಿದಿದ್ದ ಆರೋಪಿ, ಅದನ್ನು ಯುವತಿಗೆ ತೋರಿಸಿದ್ದ. ಆಕೆ ಜೊತೆ ಇದ್ದ ಗೆಳೆಯನನ್ನು ಸ್ಥಳದಿಂದ ಓಡಿಸಿ ನಂತರ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT