ಕಪಿಲೇಶ್ವರ ದೇವಳಕ್ಕೆ ರಥಯಾತ್ರೆಗೆ ಚಾಲನೆ; ಚಂದ್ರಮಂಡಲ ಮೆರವಣಿಗೆ

7

ಕಪಿಲೇಶ್ವರ ದೇವಳಕ್ಕೆ ರಥಯಾತ್ರೆಗೆ ಚಾಲನೆ; ಚಂದ್ರಮಂಡಲ ಮೆರವಣಿಗೆ

Published:
Updated:
Prajavani

ಪುತ್ತೂರು: ತಾಲ್ಲೂಕಿನ ಚಾರ್ವಾಕ ಗ್ರಾಮದ ಕಾಸ್ಪಾಡಿ ಕಪಿಲೇಶ್ವರ ದೇವಾಲಯಕ್ಕೆ ಸಮರ್ಪಣೆಗೊಳ್ಳಲಿರುವ ನೂತನ ಚಂದ್ರಮಂಡಲ ರಥದ ಮೆರವಣಿಗೆಗೆ ನಗರದ ಮಹಾಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ  ಭಾನುವಾರ ಚಾಲನೆ ನೀಡಲಾಯಿತು.

ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಚಂದ್ರ ಮಂಡಲ ರಥದ ಮೆರವಣಿಗೆಗೆ ಚಾಲನೆ ನೀಡಿದರು. ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ವಸಂತ ಕೃಷ್ಣ ಕೆದಿಲಾಯ ಅವರು ಧಾಮರ್ಿಕ ಪೂಜಾ ವಿಧಿಗಳನ್ನು ನೆರವೇರಿಸಿದರು.

 ಮೊದಲು ಕಪಿಲೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಹಾಗೂ ಚಂದ್ರಮಂಡಲ ರಥದ ದಾನಿಗಳಾದ ವಕೀಲ ಮೋಹನ ಗೌಡ ಇಡ್ಯಡ್ಕ ಮತ್ತು ಡಾ. ಆಶಾ ಅಭಿಕಾರ್ ದಂಪತಿ ಮಹಾಲಿಂಗೇಶ್ವರ ದೇವಳದಲ್ಲಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ಚಂದ್ರಮಂಡಲ ರಥ ಮೆರವಣಿಗೆ ಉದ್ಘಾಟನೆಯ ವೇಳೆ ಚಾರ್ವಾಕ ಕಾಸ್ಪಾಡಿ ಕಪಿಲೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ. ಧರ್ಮಪಾಲ ಕರಂದ್ಲಾಜೆ ಮತ್ತು ಸಮಿತಿ ಸದಸ್ಯರು, ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸಂಜೀವ ನಾಯಕ್, ಯು.ಪಿ. ರಾಮಕೃಷ್ಣ, ವಕೀಲ ಚಿದಾನಂದ ಬೈಲಾಡಿ, ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು, ಚಂದ್ರಶೇಖರ ರಾವ್ ಬಪ್ಪಳಿಗೆ, ಪುತ್ತೂರು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಶಿವರಾಮ್ ಎಚ್.ಡಿ, ಅಮರ ಕಾಸ್ಪಾಡಿ ದೈವಸ್ಥಾನದ ಅಧ್ಯಕ್ಷ ಕುಸುಮಾಧರ ರೈ, ಮೋನಪ್ಪ ಗೌಡ, ನಗರಸಭಾ ಸದಸ್ಯೆ ಗೌರಿ ಬನ್ನೂರು ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !