ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಧಾನಿಯಿಂದ ಪುತ್ತೂರಿನ ಗೇರು ಸಂಶೋಧನಾ ಕೇಂದ್ರದ 2 ಗೇರು ತಳಿ ಬಿಡುಗಡೆ

Published : 11 ಆಗಸ್ಟ್ 2024, 14:00 IST
Last Updated : 11 ಆಗಸ್ಟ್ 2024, 14:00 IST
ಫಾಲೋ ಮಾಡಿ
Comments

ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ಅವರು 109 ಹೊಸ ಕೃಷಿ ಮತ್ತು ತೋಟಗಾರಿಕೆ ತಳಿಗಳನ್ನು ಭಾನುವಾರ ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಪರಿಷತ್‌ನಲ್ಲಿ ಬಿಡುಗಡೆ ಮಾಡಿದರು. ಇವುಗಳಲ್ಲಿ ಎರಡು ಗೇರಿನ ಹೈಬ್ರಿಡ್ ತಳಿಗಳಾದ ನೇತ್ರ ಜಂಬೋ-1 ಮತ್ತು ನೇತ್ರ ಗಂಗಾವನ್ನು ಐಸಿಎಆರ್- ಗೇರು ಸಂಶೋಧನಾ ನಿರ್ದೇಶನಾಲಯ ಅಭಿವೃದ್ಧಿಪಡಿಸಿದೆ. ಈ ತಳಿಗಳ ಬಿಡುಗಡೆಯ ವೇಳೆ ಪುತ್ತೂರಿನ ಗೋಡಂಬಿ ಸಂಶೋಧನಾ ನಿರ್ದೇಶನಲಾಯದಲ್ಲಿ ವಿಜ್ಞಾನಿ-ರೈತ ಸಂವಾದ ನಡೆಯಿತು.

ಸಂಶೋಧನಾ ಕೇಂದ್ರದ ನಿರ್ದೇಶಕ ಜೆ.ದಿನಕರ ಅಡಿಗ ಮಾತನಾಡಿ, ಇದು ಸಂಸ್ಥೆಗೆ ಹೆಮ್ಮೆಯ ಕ್ಷಣವಾಗಿದ್ದು, ತಳಿ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ವಿಜ್ಞಾನಿಗಳನ್ನು ಅಭಿನಂದಿಸಿದರು.

ಹೊಸದಾಗಿ ಬಿಡುಗಡೆಯಾದ ತಳಿಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡಲಾಯಿತು. ನೇತ್ರ ಜಂಬೋ-1 ತಳಿಯ ಕುರಿತು ಜೆ.ದಿನಕರ ಅಡಿಗ ಮತ್ತು ನೇತ್ರ ಗಂಗಾ ತಳಿಯ ಕುರಿತು ಪ್ರಧಾನ ವಿಜ್ಞಾನಿ ಮೋಹನ ಜಿ.ಎಸ್. ಮಾಹಿತಿ ನೀಡಿದರು.

ನಿರ್ದೇಶನಾಲಯದ ನಿವೃತ್ತ ಪ್ರಧಾನ ವಿಜ್ಞಾನಿ ಎನ್.ಯದುಕುಮಾರ್ ಅನುಭವ ಹಂಚಿಕೊಂಡರು. ಹೊಸದಾಗಿ ಬಿಡುಗಡೆಯಾದ ನೇತ್ರ ತಳಿಗಳ ಸಸಿ ಉತ್ಪಾದನೆ ಮತ್ತು ಮಾರಾಟ ಮತ್ತು ಬೇಡಿಕೆಯ ಬಗ್ಗೆ ಮಾಹಿತಿ ನೀಡಿದರು.

ಕೃಷಿಕ ಕಡಮಜಲು ಸುಭಾಷ್ ರೈ ಅವರು ತಮ್ಮ ಗೇರು ಕೃಷಿಯ ಅನುಭವ ಮತ್ತು ಬೆಳೆ ಬೆಳೆಯುವ ಅನುಭವ ಹಂಚಿಕೊಂಡರು. 37 ವಿಜ್ಞಾನಿಗಳು ಸೇರಿದಂತೆ 24 ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಪುತ್ತೂರಿನ ಗೋಡಂಬಿ ಸಂಶೋಧನಾ ನಿರ್ದೇಶನಾಲಯದ 2 ತೇರು ತಳಿಗಳು ಸೇರಿದಂತೆ 109 ಹೊಸ ಕೃಷಿ ಮತ್ತು ತೋಟಗಾರಿಕೆ ತಳಿಗಳನ್ನು ಭಾನುವಾರ ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಪರಿಷತತ್‌ನಲ್ಲಿ ಬಿಡುಗಡೆ ಮಾಡಿದ್ದು ಈ ವೇಳೆ ಪುತ್ತೂರಿನ ಗೋಡಂಬಿ ಸಂಶೋಧನಾ ನಿರ್ದೇಶನಾಲಯದಲ್ಲಿ ವಿಜ್ಞಾನಿ-ರೈತ ಸಂವಾದ ನಡೆಯಿತು
ಪ್ರಧಾನಿ ನರೇಂದ್ರ ಮೋದಿ ಅವರು ಪುತ್ತೂರಿನ ಗೋಡಂಬಿ ಸಂಶೋಧನಾ ನಿರ್ದೇಶನಾಲಯದ 2 ತೇರು ತಳಿಗಳು ಸೇರಿದಂತೆ 109 ಹೊಸ ಕೃಷಿ ಮತ್ತು ತೋಟಗಾರಿಕೆ ತಳಿಗಳನ್ನು ಭಾನುವಾರ ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಪರಿಷತತ್‌ನಲ್ಲಿ ಬಿಡುಗಡೆ ಮಾಡಿದ್ದು ಈ ವೇಳೆ ಪುತ್ತೂರಿನ ಗೋಡಂಬಿ ಸಂಶೋಧನಾ ನಿರ್ದೇಶನಾಲಯದಲ್ಲಿ ವಿಜ್ಞಾನಿ-ರೈತ ಸಂವಾದ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT