ಶುಕ್ರವಾರ, ಮೇ 20, 2022
19 °C

ರಸ್ತೆ ಕಾಮಗಾರಿ: ಬದಲಿ ಸಂಚಾರ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಮಂಜುನಾಥ ದೇವಸ್ಥಾನದ ದ್ವಾರದ ಮುಂದೆ ಕಲ್ವರ್ಟ್ ಒಳಚರಂಡಿ ಜಾಲದ ವ್ಯವಸ್ಥೆ ಪುನರ್ ನಿರ್ಮಾಣ ಮಾಡುವ ಕಾಮಗಾರಿ ಕೈಗೊಳ್ಳುವ ಸಂಬಂಧ ಮೇ 7ರಿಂದ ಜೂನ್‌ 5ರವರೆಗೆ 30 ದಿನಗಳ ಕಾಲ ಬದಲಿ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾಮಗಾರಿ ನಡೆಯುವ ವೇಳೆ ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಬಟ್ಟಗುಡ್ಡ ಜಂಕ್ಷನ್‌ನಿಂದ ಕದ್ರಿ ದೇವಸ್ಥಾನ ರಸ್ತೆಯ ಮೂಲಕ ಮಲ್ಲಿಕಟ್ಟೆ ಜಂಕ್ಷನ್ ಕಡೆಗೆ ಹೋಗುವ ಎಲ್ಲಾವಾಹನಗಳು ಬಟ್ಟಗುಡ್ಡ ಜಂಕ್ಷನ್‌ನಿಂದ ಕದ್ರಿ ಕಂಬಳ ರಸ್ತೆಯಲ್ಲಿ ನೇರವಾಗಿ ಸಂಚರಿಸಿ ಭಾರತ್ ಬೀಡಿ ಜಂಕ್ಷನ್‍ನಲ್ಲಿ ಎಡಕ್ಕೆ ತಿರುಗಿ ಮಲ್ಲಿಕಟ್ಟೆ ಜಂಕ್ಷನ್ ಕಡೆಗೆ ಸಂಚರಿಸುವುದು.

ಮಲ್ಲಿಕಟ್ಟೆ ಜಂಕ್ಷನ್‌ನಿಂದ ಕದ್ರಿ ದೇವಸ್ಥಾನದ ರಸ್ತೆಯ ಮೂಲಕ ಬಟ್ಟಗುಡ್ಡ ಜಂಕ್ಷನ್ ಕಡೆಗೆ ಹೋಗುವ ವಾಹನಗಳು ಮಲ್ಲಿಕಟ್ಟೆ ಜಂಕ್ಷನ್‍ನಿಂದ ಭಾರತ್ ಬೀಡಿ ಜಂಕ್ಷನ್ ಕಡೆಗೆ ಸಂಚರಿಸಿ ಬಲಕ್ಕೆ ತಿರುಗಿ ಕದ್ರಿ ಕಂಬ್ಳ ರಸ್ತೆಯ ಮೂಲಕ ಬಟ್ಟಗುಡ್ಡ ಜಂಕ್ಷನ್ ಕಡೆಗೆ ಸಂಚರಿಸುವುದು. ಮಲ್ಲಿಕಟ್ಟೆ ವೃತ್ತದ ಬಳಿ ಇರುವ ಕದ್ರಿ ದೇವಸ್ಥಾನದ ದ್ವಾರದ ಮೂಲಕ ದೇವಸ್ಥಾನಕ್ಕೆ ಹೋಗುವ ವಾಹನಗಳು ಮಲ್ಲಿಕಟ್ಟೆ ಜಂಕ್ಷನ್‍ನಲ್ಲಿ ನೇರವಾಗಿ ಭಾರತ್ ಬೀಡಿ ಜಂಕ್ಷನ್ ಕಡೆಗೆ ಸಂಚರಿಸಿ ಬಲಕ್ಕೆ ತಿರುಗಿ ಕದ್ರಿ ಕಂಬಳ ರಸ್ತೆಯಲ್ಲಿ ಮುಂದಕ್ಕೆ ಸಂಚರಿಸಿ ಕದ್ರಿ ದೇವಸ್ಥಾನದ ರಸ್ತೆ ಮೂಲಕ ಕದ್ರಿ ದೇವಸ್ಥಾನ ತಲುಪುವುದು.

ಮಹಾನಗರ ಪಾಲಿಕೆ ವ್ಯಾಪ್ತಿಯ ವಿಭಾಗ ನಂಬರ್-07ರ ಹೊಸಬೆಟ್ಟು ಫಿಶರೀಸ್ ರಸ್ತೆಯಲ್ಲಿ ಕಿರುಸೇತುವೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಜೂನ್ 19ರವರೆಗೆ 45 ದಿನಗಳ ಕಾಲ ಬದಲಿ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾಮಗಾರಿ ನಡೆಯುವ ವೇಳೆ ರಾಷ್ಟ್ರೀಯ ಹೆದ್ದಾರಿ-66ರ ಹೊಸಬೆಟ್ಟು ಜಂಕ್ಷನ್ ಕಡೆಯಿಂದ ಹೊಸಬೆಟ್ಟು ಬೀಚ್ ಕಡೆ ಅಂದರೆ ಫಿಶರೀಸ್ ರಸ್ತೆ ಕಡೆಗೆ ಹೋಗುವ ಹಾಗೂ ಬರುವ ಲಘುವಾಹನಗಳು (ಕಾರು, ಆಟೊರಿಕಾ, ದ್ವಿಚಕ್ರ) ರಾಷ್ಟ್ರೀಯ ಹೆದ್ದಾರಿ-66ರ ರಸ್ತೆಯಲ್ಲಿ ಹೊಸಬೆಟ್ಟು ಜಂಕ್ಷನ್‍ನಲ್ಲಿ ಇರುವ ಬಸ್‌ ನಿಲ್ದಾಣದ ಪವನ್ ಮಾರ್ಬಲ್ಸ್ ಮತ್ತು ಗ್ರಾನೈಟ್ಸ್ ಕಾಂಕ್ರೀಟ್ ರಸ್ತೆಯಲ್ಲಿ ಸಾಗಿ ಧನ್ವಂತರಿ ಆಯುರ್ವೇದಿಕ್ ಕ್ಲಿನಿಕ್ ರಸ್ತೆಯ ಮೂಲಕ ಫಿಶರೀಸ್ ಶಾಲೆಯ ಮುಖ್ಯ ರಸ್ತೆಯಲ್ಲಿ ಸಾಗಿ ಫಿಶರೀಸ್ ಹಾಗೂ ಬೀಚ್ ಕಡೆಗೆ ಸಂಚರಿಸಿ ವಾಪಾಸು ಬರಲು ಅದೇ ಮಾರ್ಗದ ರಸ್ತೆಯನ್ನು ಉಪಯೋಗಿಸುವುದು.

ಸುರತ್ಕಲ್ ಕಡೆಗೆ ಸಂಚರಿಸುವ ರೂಟ್ ನಂ.59 ಬಸ್‌ಗಳು ರಾಷ್ಟ್ರೀಯ ಹೆದ್ದಾರಿ 66ರ ಚಿತ್ರಾಪುರ ದ್ವಾರ ರಸ್ತೆಯ ಮೂಲಕ ಶೆಟ್ಟಿ ಜನರಲ್ ಸ್ಟೋರ್ಸ್‌ ಮುಂದೆ ಫಿಶರೀಸ್ ಶಾಲೆಯಾಗಿ ಮುಂದೆ ಸಾಗಿ ಈಶ್ವರ ನಗರ ಬಲ ರಸ್ತೆಯ ಮೂಲಕ ನವನಗರ ನಂದಾದೀಪ ಅಪಾರ್ಟ್‌ಮೆಂಟ್ ಕಡೆ ಸಾಗಿ ಲಿಂಗಪ್ಪ ಸಾಲಿಯಾನ್ ಕಾಂಪೌಂಡ್ ಬಳಿ ಬಲ ರಸ್ತೆ ಕಡೆ ಸಾಗಿ ಕಾಳಪ್ಪಯ್ಯ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿ-66ರ ರಸ್ತೆಯ ಮೂಲಕ ಸುರತ್ಕಲ್ ಕಡೆ ಸಂಚರಿಸಿ ವಾಪಾಸ್‌ ಬರಲು ಅದೇ ಮಾರ್ಗದ ರಸ್ತೆಯನ್ನು ಉಪಯೋಗಿಸುವುದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.