‘ಜುಲೈ 21ರಂದು ನನ್ನ ವಾಟ್ಸ್‌ಆ್ಯಪ್‌ಗೆ ಅರೆಕಾಲಿಕ ಉದ್ಯೋಗದ ಕುರಿತ ಸಂದೇಶ ಬಂತು. ಅದನ್ನು ಕಳುಹಿಸಿದವರು ಟೆಲಿಗ್ರಾಂ ಆ್ಯಪ್ ಕೊಂಡಿಯನ್ನು ಕಳುಹಿಸಿದ್ದರು. ಅದನ್ನು ತೆರೆದು ವಿವರ ತುಂಬಿದ ಬಳಿಕ ನನ್ನ ಬ್ಯಾಂಕ್ ಖಾತೆಗೆ ₹ 123 ಹಾಕಿದ್ದರು. ನಂತರ ವಿಡಿಯೊ ಕಳುಹಿಸಿದ್ದರು. ಅವರ ಸೂಚನೆಯಂತೆ ಆ ವಿಡಿಯೊ ನೋಡಿ ಅದರ ಸ್ಕ್ರೀನ್ ಶಾಟ್ ಕಳುಹಿಸಿದ್ದೆ. ಬಳಿಕ ನನ್ನ ಖಾತೆಗೆ ₹ 130 ಹಾಕಿದ್ದರು. ಕಳುಹಿಸಿದ್ದ ವಿಡಿಯೋ ತಪ್ಪಾಗಿದೆ ಎಂದು ಹೇಳಿ ಇನ್ನೊಂದು ಕೊಂಡಿಯನ್ನು ಕಳುಹಿಸಿದ್ದರು. ಅದನ್ನು ಸರಿಪಡಿಸಲು ₹ 1ಸಾವಿರ ಪಾವತಿಸುವಂತೆ ಸೂಚಿಸಿ ಬ್ಯಾಂಕ್ ಖಾತೆಯ ವಿವರ ಕಳುಹಿಸಿದ್ದರು. ಆ ಬಳಿಕ ನನ್ನ ಖಾತೆಗೆ ₹ 1,300 ಹಾಕಿದ್ದರು. ಹೀಗೆ ಬೇರೆ ಬೇರೆ ಖಾತೆಗೆ ಹಣ ಹಾಕುವಂತೆ ತಿಳಿಸಿ, ಹಂತ ಹಂತವಾಗಿ ₹ 28.18 ಲಕ್ಷ ಕಟ್ಟಿಸಿಕೊಂಡು ವಂಚಿಸಿದ್ದಾರೆ ಎಂದು ಸಂತ್ರಸ್ತ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ‘ ಎಂದು ಪೊಲೀಸರು ತಿಳಿಸಿದ್ದಾರೆ.