‘ನನ್ನ ಮೊಬೈಲ್‌ಗೆ ಜುಲೈ 15ರಂದು ಕರೆ ಮಾಡಿ, ಶೈನ್ ಡಾ. ಕಾಮ್ ಸಂಸ್ಥೆಯ ಮುಖ್ಯಸ್ಥೆ ಮೇಘ ಎಂದು ಪರಿಚಯಿಸಿಕೊಂಡ ಮಹಿಳೆ ಸಿಂಗಪುರದಲ್ಲಿ ನೆಸ್ಲೆ ಕಂಪನಿಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದರು. ಅವರ ಸೂಚನೆ ಮೇರೆಗೆ ಅರ್ಜಿ ನಮೂನೆ ವೆಚ್ಚಕ್ಕಾಗಿ ಮೊದಲು ಜುಲೈ 16ರಂದು ₹ 790 ಕಳುಹಿಸಿದ್ದೆ. ಬಳಿಕವೂ ಅವರ ಸೂಚನೆ ಮೇರೆಗೆ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಜುಲೈ 17ರಂದು ₹ 5,600, ಜುಲೈ 19ರಂದು ₹ 5 ಸಾವಿರ, ಜುಲೈ 22ರಂದು ₹ 30 ಸಾವಿರ ಹಣ ಕಳುಹಿಸಿದ್ದೆ. ಬಳಿಕ ಉದ್ಯೋಗದ ನೇಮಕಾತಿ ಪತ್ರ, ವೀಸಾ, ತರಬೇತಿ ಸಲುವಾಗಿ ಮತ್ತಷ್ಟು ಹಣ ಕಟ್ಟುವಂತೆ ಸೂಚಿಸಿದರು. ಜುಲೈ 23ರಂದು ₹ 62 ಸಾವಿರ, ಜುಲೈ 24ರಂದು ₹1.38 ಲಕ್ಷ, ಜುಲೈ 25ರಂದು ₹ 80 ಸಾವಿರ, ಜುಲೈ 29ರಂದು ₹ 53,551, ಜುಲೈ 30ರಂದು ₹ 90 ಸಾವಿರ ಮತ್ತು ₹ 20 ಸಾವಿರ ಹಣ ಪಾವತಿಸಿದ್ದೆ. ಆ.2ರಂದು ಬೆಂಗಳೂರಿನ ಜೆ.ಡಬ್ಲ್ಯು. ಮ್ಯಾರಿಯೇಟ್ ಹೋಟೆಲ್‌ಗೆ ನೆಸ್ಲೆ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರು ಸಂದರ್ಶನ ನಡೆಸಲಿದ್ದಾರೆ ಎಂದು ತಿಳಿಸಿದ್ದರು. ಅತ್ತ ಉದ್ಯೋಗವನ್ನೂ ಕೊಡದೇ, ಕಟ್ಟಿದ ಹಣವನ್ನೂ ಮರಳಿಸದೆ ನನಗೆ ವಂಚಿಸಲಾಗಿದೆ’ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.