ಶಬರಿಮಲೆ ಮಹಿಳೆಯರ ಪ್ರವೇಶ ಖಂಡಿಸಿ ಪ್ರತಿಭಟನೆ

7

ಶಬರಿಮಲೆ ಮಹಿಳೆಯರ ಪ್ರವೇಶ ಖಂಡಿಸಿ ಪ್ರತಿಭಟನೆ

Published:
Updated:

ಮಂಗಳೂರು: ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ಹಾಗೂ ಕೇರಳ ಕಮ್ಯೂನಿಸ್ಟ್‌ ಸರ್ಕಾರದ ಹಿಂದೂ ವಿರೋಧಿ ಧೋರಣೆ ಖಂಡಿಸಿ ಶಬರಿಮಲೆ‌ ಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ‌ ಗುರುವಾರ ನಗರದ ಕ್ಲಾಕ್ ಟವರ್ ಪ್ರತಿಭಟನೆ‌ ನಡೆಯಿತು.

ಕಮ್ಯೂನಿಸ್ಟ್‌ ಪಕ್ಷದ ಕಾರ್ಯಕರ್ತರು ಹಿಂದೂಗಳ‌ ಧಾರ್ಮಿಕ ಭಾವನೆಗೆ ಘಾಸಿ ತರುವ ಉದ್ದೇಶದಿಂದಲೆ‌ ಅಯ್ಯ ಪ್ಪ ಸ್ವಾಮಿ ದೇವಳಕ್ಕೆ ಪ್ರವೇಶ ಮಾಡಿದ್ದಾರೆ. ದೇವಳ ಪ್ರವೇಶಿಸಿದವರು ಭಸ್ಮಧಾರಿಗಳಾಗದೇ, ಇರುಮುಡಿ ತುಪ್ಪವನ್ನು ದೇವರಿಗೆ ಅರ್ಪಿಸದೇ ಪಾವಿತ್ರ್ಯ ಹಾಳು ಮಾಡುವ ಉದ್ದೇಶವನ್ನಷ್ಟೇ ಇರಿಸಿಕೊಂಡಿದ್ದರು ಎಂದು ಪ್ರತಿಭಟನೆ‌ ಕಾರರು ಹೇಳಿದರು.

ವಿಶ್ವನಾಥ ಗುರುಸ್ವಾಮಿ, ಜಿಲ್ಲಾಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಪಾಲಿಕೆ‌ ಸದಸ್ಯೆ ರೂಪಾ ‌ಡಿ ಬಂಗೇರ, ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಶರಣ್ ಪಂಪ್ ವೆಲ್, ಕ್ಯಾ. ಬ್ರಿಜೇಶ್ ಚೌಟ, ಅಯ್ಯಪ್ಪ ವ್ರತಧಾರಿಗಳು ಇದ್ಧರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !