ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಂತ್ರಜ್ಞಾನ ಬೆರೆತ ಕಲಿಕೆ ಪ್ರೋತ್ಸಾಹಿಸಿ’

ಜೋಸೆಫ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ‘ಟಿಯಾರಾ’
Last Updated 20 ಮೇ 2022, 16:31 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು ಆಯೋಜಿಸಿದ್ದ ಎರಡು ದಿನಗಳ ಟೆಕ್ನೋ ಕಲ್ಚರಲ್ ಫೆಸ್ಟ್ ‘ಟಿಯಾರಾ 2022’ ಕಾಲೇಜಿನ ಆವರಣದಲ್ಲಿ ನಡೆಯಿತು.

ನೋವಿಗೊ ಸೊಲ್ಯೂಷನ್ಸ್‌ನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಪ್ರವೀಣ್ ಕುಮಾರ್ ಕಲ್ಭಾವಿ ಮಾತನಾಡಿ, ತಂತ್ರಜ್ಞಾನದೊಂದಿಗೆ ಬೆರೆತ ಕಲಿಕೆಯನ್ನು ಪ್ರೋತ್ಸಾಹಿಸಬೇಕು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುತ್ತವೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ರಿಯೊ ಡಿಸೋಜ, ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಕಾಲೇಜಿನ ನಿರ್ದೇಶಕ ರೆ.ವಿಲ್ಫ್ರೆಡ್ ಪ್ರಕಾಶ್ ಡಿಸೋಜ, ಸಹ ನಿರ್ದೇಶಕ ರೆ. ಆಲ್ವಿನ್ ರಿಚರ್ಡ್ ಡಿಸೋಜ, ಮಾನವ ಸಂಪನ್ಮೂಲ ವ್ಯವಸ್ಥಾಪಕ ರಾಕೇಶ್ ಲೋಬೊ, ಕಾರ್ಯಕ್ರಮದ ಸಂಚಾಲಕರಾದ ವಿನೂತನ್ ಕಲಿವೀರ್ ಮತ್ತು ಅವಿಲಾ ಪ್ರಿಯಾ ಪಿಂಟೊ, ವಿದ್ಯಾರ್ಥಿ ಸಂಚಾಲಕರಾದ ಶರಧಿ ಮತ್ತು ಕ್ಯಾರನ್ ಡಿಕುನ್ಹಾ ವೇದಿಕೆಯಲ್ಲಿದ್ದರು.

ಕೃತಕ ಬುದ್ಧಿಮತ್ತೆ ಚಾಲಿತ ವ್ಯಕ್ತಿತ್ವ ‘ಅಟ್ಲಾಸ್’ ಉದ್ಘಾಟನೆಯ ಪ್ರಮುಖ ಆಕರ್ಷಣೆಯಾಗಿತ್ತು. ಈ ಮೂಲಕ ಕಾಲೇಜು ಆಯೋಜಿಸಿದ ಮೊದಲ ಟೆಕ್ನೋ ಕಲ್ಚರಲ್ ಫೆಸ್ಟ್ ಟಿಯಾರಾ ಅನಾವರಣಗೊಂಡಿತು. ತಾಂತ್ರಿಕ-ಸಾಂಸ್ಕೃತಿಕ ಕಾರ್ಯಕ್ರಮಗಳ ಹೊರತಾಗಿ, ಪ್ರಮುಖ ಆಕರ್ಷಣೆಗಳಲ್ಲಿ ಮೊದಲ ದಿನ ನಡೆದ ಬ್ಯಾಂಡ್‌ಗಳ ಸ್ಪರ್ಧೆ ಮತ್ತು ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಜನಪ್ರಿಯ ಡಿಜೆ ಶಿವ ಮಾನ್ವಿ ಅವರ ಡಿಜೆ ನೈಟ್ ಗಮನ ಸೆಳೆಯಿತು.

2 ದಿನ ನಡೆದ ಕಾರ್ಯಕ್ರಮಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ತಾಂತ್ರಿಕ ವಿಭಾಗದಲ್ಲಿ ಎನ್‍ಎಂಎಎಂ ತಾಂತ್ರಿಕ ಸಂಸ್ಥೆ, ನಿಟ್ಟೆ ಸಮಗ್ರ ಚಾಂಪಿಯನ್‌ಷಿಪ್ ಪಡೆದರೆ, ಬಂಟಕಲ್‌ನ ಶ್ರೀಮಧ್ವ ವಾದಿರಾಜ ತಾಂತ್ರಿಕ ಸಂಸ್ಥೆ ಸಮಗ್ರ ರನ್ನರ್ಸ್ ಅಪ್ ಪ್ರಶಸ್ತಿ ಪಡೆಯಿತು. ತಾಂತ್ರಿಕೇತರ ವಿಭಾಗದಲ್ಲಿ ನಿಟ್ಟೆಯ ಎನ್‍ಎಂಎಎಂ ತಾಂತ್ರಿಕ ಸಂಸ್ಥೆ ಸಮಗ್ರ ಚಾಂಪಿಯನ್‌ಷಿಪ್ ಮತ್ತು ಉಜಿರೆಯ ಎಸ್‌ಡಿಎಂ ಪದವಿ ಕಾಲೇಜು ಸಮಗ್ರ ರನ್ನರ್ಸ್ ಅಪ್ ಟ್ರೋಫಿಯನ್ನು ಪಡೆದುಕೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT