ಸುಬ್ರಹ್ಮಣ್ಯ: ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಸಕಲೇಶಪುರ– ಬಂಟ್ವಾಳ ರೈಲು ವಿಭಾಗದಲ್ಲಿ ಮುಖ್ಯ ಕಚೇರಿಯ ಸುರಕ್ಷತಾ ತಂಡದಿಂದ ಎರಡು ದಿನ ಆಂತರಿಕ ಸುರಕ್ಷತಾ ತಪಾಸಣೆ ನಡೆಸಲಾಯಿತು.

ತಪಾಸಣೆಯಲ್ಲಿ ಮುಖ್ಯ ಸುರಕ್ಷತಾ ಅಧಿಕಾರಿ ಎಂ. ರಾಮಕೃಷ್ಣ, ಸಂಚಾರ ವ್ಯವಸ್ಥಾಪಕ ಇ. ಹರಿಕೃಷ್ಣನ್ ಸೇರಿದಂತೆ ಸುರಕ್ಷತಾ ಅಧಿಕಾರಿಗಳು, ಮೈಸೂರು ವಿಭಾಗದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ತಪಾಸಣೆ ವೇಳೆ ಲೆವೆಲ್ ಕ್ರಾಸಿಂಗ್ ಗೇಟ್ಗಳು, ಹಳಿ ವಕ್ರತೆ, ಸ್ವಿಚ್ ವಿಸ್ತರಣೆ ಜಂಟಿಗಳು, ಪ್ರಮುಖ ಹಾಗೂ ಸಣ್ಣ ಸೇತುವೆ, ಪಾಯಿಂಟ್ ಮತ್ತು ಕ್ರಾಸಿಂಗ್, ನಿಲ್ದಾಣಗಳು, ಸುರಂಗ ಮಾರ್ಗ, ವೈದ್ಯಕೀಯ ಪರಿಹಾರ ವಾಹನ, ವಿದ್ಯುತ್ ಉಪಕರಣ, ಸಿಬ್ಬಂದಿ ಲಾಬಿ, ವಿಶ್ರಾಂತಿ ಕೊಠಡಿ, ರಿಲೇ ಕೊಠಡಿ, ಹಳಿ ಯಂತ್ರ ಸಿಬ್ಬಂದಿಯ ಶಿಬಿರ ಕೋಚ್ಗಳನ್ನು ಪರಿಶೀಲಿಸಲಾಯಿತು. ಹಳಿಗಳ ಸ್ಥಿತಿ, ಯಾರ್ಡ್ ವಿನ್ಯಾಸ, ಬ್ಯಾಟರಿ ಕೊಠಡಿಗಳು, ಸಿಗ್ನಲಿಂಗ್ ವ್ಯವಸ್ಥೆ, ನಿಲ್ದಾಣ ನಿಯಂತ್ರಣ ಫಲಕಗಳು, ಟ್ರಾಕ್ಷನ್ ಉಪಕೇಂದ್ರಗಳು, ವಿಭಾಗೀಕರಣ, ಸಮಾನಾಂತರ ಸಂಪರ್ಕ ಕಂಬಗಳು ಸೇರಿದಂತೆ ವಿವಿಧ ಸುರಕ್ಷತಾ ಸಂಬಂಧಿತ ವ್ಯವಸ್ಥೆಗಳ ತಪಾಸಣೆ ನಡೆಯಿತು.

ನಿಲ್ದಾಣಗಳು ಮತ್ತು ವಿಭಾಗದ ವಿವಿಧ ಸ್ಥಳಗಳಲ್ಲಿ ಸುರಕ್ಷತಾ ನಿಯಮಗಳು, ಕಾರ್ಯಾಚರಣಾ ವಿಧಾನಗಳನ್ನು ಸಮರ್ಪಕವಾಗಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು, ರೈಲು ಕಾರ್ಯಾಚರಣೆಯ ಸುರಕ್ಷತಾ ಮಾನದಂಡಗಳನ್ನು ಇನ್ನಷ್ಟು ಬಲಪಡಿಸುವುದು ತಪಾಸಣೆಯ ಉದ್ದೇಶ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-29-2027915516

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.