ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಬಿಸಿಲಿನ ಝಳ ತೀವ್ರ: ಬಿಸಿ ಗಾಳಿ

ಕಡಬದಲ್ಲಿ 39.3 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲು
Published : 1 ಮೇ 2024, 16:14 IST
Last Updated : 1 ಮೇ 2024, 16:14 IST
ಫಾಲೋ ಮಾಡಿ
Comments

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಗರಿಷ್ಠ 39.3 ಡಿಗ್ರಿ ಸೆಲ್ಸಿಯಸ್‌, ಉಪ್ಪಿನಂಗಡಿಯಲ್ಲಿ 38.1 ಡಿಗ್ರಿ, ಕೊಕ್ಕಡದಲ್ಲಿ 37.4 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ಬುಧವಾರ ದಾಖಲಾಗಿದೆ.

ಬುಧವಾರ ಮೋಡ ಸಹಿತ ಬಿಸಿಲು ಇದ್ದು, ಸರಾಸರಿ ಗರಿಷ್ಠ ಉಷ್ಣಾಂಶ 36.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕರಾವಳಿಯಲ್ಲಿ ಮೇ 6 ಮತ್ತು 7ರಂದು ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಿಸಿಲಿನ ತೀವ್ರತೆ ಹೆಚ್ಚಿರುವ ಕಾರಣ ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಹೊರಗೆ ಸಂಚಾರ ಮಾಡುವುದನ್ನು ತಪ್ಪಿಸಿ, ಮನೆಯಲ್ಲಿಯೇ ಇದ್ದರೆ ಒಳಿತು. ಬಿಸಿಲಿನಲ್ಲಿ ಹೆಚ್ಚು ಕಾಲ ಕಳೆಯುವುದನ್ನು ತಪ್ಪಿಸಿ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ನೀರಿನ ಮಟ್ಟ ಕುಸಿತ:

ಮಂಗಳೂರು ನಗರಕ್ಕೆ ನೀರು ಪೂರೈಕೆಯಾಗುವ ತುಂಬೆ ಕಿಂಡಿ ಅಣೆಕಟ್ಟೆಯ ನೀರಿನ ಮಟ್ಟ ಕುಸಿದಿದ್ದು, ಬುಧವಾರ 4.34 ಮೀಟರ್‌ಗೆ ಇಳಿಕೆಯಾಗಿದೆ. ಎಎಂಆರ್‌ ಅಣೆಕಟ್ಟೆಯಲ್ಲಿ ಬುಧವಾರ 15.96 ಮೀಟರ್ ನೀರಿನ ಸಂಗ್ರಹ ಇತ್ತು. ಹರೇಕಳ ಅಣೆಕಟ್ಟೆಯಿಂದ ನಿತ್ಯವೂ ತುಂಬೆ ಅಣೆಕಟ್ಟೆಗೆ 50ರಿಂದ 60 ಎಂಎಲ್‌ಡಿ ನೀರನ್ನು ಪಂಪ್ ಮಾಡಲಾಗುತ್ತಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT