ಮಂಗಳೂರು: ದೊಡ್ಡ ಹಡಗು, ಕಾರ್ಗೊ, ಪ್ಯಾಸೆಂಜರ್ ಹಡಗು ಸೇರಿದಂತೆ ಏಳು ಮಾದರಿಯ ಹಡಗುಗಳು ದೇಶದಲ್ಲಿಯೇ ನಿರ್ಮಾಣವಾಗಲಿದ್ದು, ಆತ್ಮ ನಿರ್ಭರ ಭಾರತಕ್ಕೆ ಇದು ಕೊಡುಗೆಯಾಗಲಿದೆ ಎಂದು ಎಂದು ಕೇಂದ್ರ ಬಂದರು, ನೌಕಾ ಮತ್ತು ಜಲಯಾನ ಸಚಿವ ಸರ್ಬಾನಂದ ಸೋನೊವಾಲ್ ಹೇಳಿದರು.

ಸಿಎಂಸಿ ಸಮೂಹ ಶಿಕ್ಷಣ ಸಂಸ್ಥೆಗೆ ಸೇರಿದ ಇಲ್ಲಿನ ಮಂಗಳೂರು ಮರೈನ್ ಕಾಲೇಜ್ ಆ್ಯಂಡ್ ಟೆಕ್ನಾಲಜಿಯ ನವೀಕೃತ ಕ್ಯಾಂಪಸ್ ಅನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವದೇಶಿ ಉತ್ಪನ್ನಗಳು, ಸ್ವಾವಲಂಬನೆ ಸಾಧಿಸಲು ಸಮೂಹದ ಬೆಂಬಲ ದೊರೆಯಬೇಕು. ಯುವಶಕ್ತಿ ಈ ದೇಶದ ಮಹಾನ್ ಶಕ್ತಿ ಆಗಿದ್ದು, ಯುವಜನರಲ್ಲಿ ಸ್ವಾವಲಂಬನೆಯ ಕಲ್ಪನೆ ಅರಳಿದರೆ, ಇದು ಪರಿವರ್ತನೆಯ ಪರ್ವಕ್ಕೆ ದಿಕ್ಕು ತೋರುತ್ತದೆ ಎಂದರು.

‘ಸಾಗರ್ ಮೇ ಯೋಗ್’ ಕಲಿಕಾ ತರಬೇತಿಯು ಜಲಯಾನ ವೃತ್ತಿಯಲ್ಲಿರುವವರಿಗೆ ದೈಹಿಕ ಸದೃಢತೆಯ ಜೊತೆಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಭಾರತದಲ್ಲಿ ಪುರಾತನ ಕಾಲದಿಂದ ಅನುಸರಿಸಿಕೊಂಡು ಬಂದಿರುವ ಯೋಗ ಪದ್ಧತಿಯು ಇಂದು ಇಡೀ ವಿಶ್ವವನ್ನು ವ್ಯಾಪಿಸಿದೆ. ಪ್ರತಿನಿತ್ಯ ಯೋಗ ಮಾಡುವುದರಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದರು.

ಮೆರಿಟೈಮ್ ಕ್ಷೇತ್ರವನ್ನು ಸಂಪೂರ್ಣ ಡಿಜಿಟಲೀಕರಣ ಗೊಳಿಸುವ ಜೊತೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಯೋಚಿಸಲಾಗಿದೆ. ದೊಡ್ಡ ಹಡಗು, ಕಾರ್ಗೊ, ಪ್ಯಾಸೆಂಜರ್ ಹಡಗು ಸೇರಿದಂತೆ ಏಳು ಮಾದರಿಯ ಹಡಗುಗಳನ್ನು ಭಾರತದಲ್ಲಿಯೇ ನಿರ್ಮಾಣ ಮಾಡುವ ಮೂಲಕ ಸ್ವಾವಲಂಬನೆ ಸಾಧಿಸುವುದು ನಮ್ಮ ಉದ್ದೇಶ. ಸದೃಢ ಮಾನವ ಸಂಪನ್ಮೂಲದಿಂದ ಮಾತ್ರ ಇವೆಲ್ಲ ಸಾಧನೆ ಸಾಧ್ಯವಾಗುತ್ತದೆ ಎಂದರು.

‘ಸಾಗರ್ ಮೇ ಯೋಗ್’ ಕಲಿಕಾ ನಿರ್ವಹಣಾ ವ್ಯವಸ್ಥೆಯನ್ನು ಉದ್ಘಾಟಿಸಲಾಯಿತು.

ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಡಾ. ಭರತ್ ಶೆಟ್ಟಿ, ಮುಂಬೈನ ಸಾಗರ ನಿರ್ದೇಶನಾಲಯದ ನಿರ್ದೇಶಕ ಶ್ಯಾಮ್ ಜಗನ್ನಾಥನ್, ಹೆಚ್ಚುವರಿ ನಿರ್ದೇಶಕ ಸುಶೀಲ್ ಖೋಪಡೆ, ಎಂಎಸ್ಸಿ ಕ್ರ್ಯೂಯಿಂಗ್ ಸರ್ವಿಸಸ್ನ ವ್ಯವಸ್ಥಾಪಕ ನಿರ್ದೇಶಕ ಕ್ಯಾ.ಎಂ.ಪಿ. ಭಾಸಿನ್ ಉಪಸ್ಥಿತರಿದ್ದರು.

ಸಿಎಂಸಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್.ಐ. ನಾಥನ್ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕಿ ಕ್ಲಾರಿಸ್ಸಾ ಐ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.