ಪುತ್ತೂರು : ಸೆ.8ರಂದು ಮೊಸರು ಕುಡಿಕೆ ಉತ್ಸವ

7

ಪುತ್ತೂರು : ಸೆ.8ರಂದು ಮೊಸರು ಕುಡಿಕೆ ಉತ್ಸವ

Published:
Updated:

ಪುತ್ತೂರು : ವಿಶ್ವ ಹಿಂದೂ ಪರಿಷದ್ ಹಾಗೂ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷದ್‌ ಸ್ಥಾಪನಾ ದಿನಾಚರಣೆಯ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಸೆಪ್ಟೆಂಬರ್‌ 8ರಂದು ಇಲ್ಲಿನ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ‘ಪುತ್ತೂರು ಮೊಸರು ಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆ' ನಡೆಯಲಿದೆ. ಸ್ಪರ್ಧೆಗಳು  ನಡೆಯಲಿವೆ’ ಎಂದು ವಿಶ್ವ ಹಿಂದೂ ಪರಿಷದ್ ಪುತ್ತೂರು ಪ್ರಖಂಡದ ಕಾರ್ಯದರ್ಶಿ ನವೀನ್ ಕುಲಾಲ್  ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಶ್ರೀ ಕೃಷ್ಣನ ಆದರ್ಶಗಳನ್ನು ಜನತೆಗೆ ಸಾರುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ವಿವಿಧ ಆಟೋಟ ಸ್ಪರ್ಧೆಗಳು ಇದೇ 26 ರಂದು ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ದಿ.ಟಿ.ರಾಧಾಕೃಷ್ಣ ಭಟ್ ಸ್ಮರಣಾರ್ಥ ಪುರುಷರ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ ಹಾಗೂ ಪುರುಷರಿಗೆ ಹಗ್ಗಜಗ್ಗಾಟ ಸ್ಪರ್ಧೆ ನಡೆಯುವುದು. ಅಂದು ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಮಕ್ಕಳಿಗೆ ಜಿಲ್ಲಾಮಟ್ಟದ ಮುದ್ದುಕಂದ, ಕಂದಕೃಷ್ಣ, ಬಾಲಕೃಷ್ಣ, ಕಿಶೋರಕೃಷ್ಣ, ಗೋಪಿಕೃಷ್ಣ, ರಾಧಾಕೃಷ್ಣ, ಯಶೋಧಕೃಷ್ಣ, ಕೃಷ್ಣ-ಅರ್ಜುನ, ಸುಧಾಮಕೃಷ್ಣ ಮತ್ತು ಶಂಕನಾದ ಸ್ಪರ್ಧೆಗಳು ನಡೆಯಲಿವೆ’ ಎಂದರು.

‘ಸೆಪ್ಟೆಂಬರ್‌ 4ರಂದು ಸಂಜೆ 4ರಿಂದ ಮುರದಿಂದ ದರ್ಬೆ ವರೆಗೆ ವಾಹನ ರ‍್ಯಾಲಿ ನಡೆಯುವುದು. 8 ರಂದು ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ 11 ರಿಂದ 16 ವರ್ಷಗಳ ಮಕ್ಕಳಿಗೆ ಭಾರತಮಾತೆ ಚಿತ್ರ ಬಿಡಿಸುವುದು, ಸಂಗೀತ ಸ್ಪರ್ಧೆ, ಸ್ಮರಣ ಶಕ್ತಿ, ಮಡಿಕೆ ಒಡೆಯುವುದು, ದೇಶಭಕ್ತಿ ಗೀತೆ, ಮಹಿಳೆಯರಿಗೆ ಸಂಗೀತ ಕುರ್ಚಿ, ಸಂಗೀತ ಸ್ಪರಧೆ, ಗುಂಡೆಸೆತ, ಹಗ್ಗಜಗ್ಗಾಟ ಸ್ಪರ್ಧೆ, ಪುರುಷರಿಗೆ ಉದ್ದಕಂಬ ಸ್ಪರ್ಧೆಗಳು ನಡೆಯಲಿವೆ. ಸಂಜೆ 2.30ರಿಂದ ಬೊಳುವಾರಿನ ಆಂಜನೇಯ ಮಂತ್ರಾಲಯದ ಬಳಿಯಿಂದ ಭವ್ಯ ಶೋಭಾಯಾತ್ರೆ ನಡೆಯುವುದು’ ಎಂದರು.

ಧಾರ್ಮಿಕ ಸಭೆಲ್ಲಿ ಮೊಸರು ಕುಡಿಕೆ ಉತ್ಸವ ದಶಮಾನೋತ್ಸವ ಸಮಿತಿ ಅಧ್ಯಕ್ಷ ಪೂರ್ಣಜಿತ್ ರೈ ಬೆಳ್ಳಿಪ್ಪಾಡಿ ಅಧ್ಯಕ್ಷತೆ ವಹಿಸುವರು. ಸಂಸದ ಪ್ರತಾಪಸಿಂಹ ದಿಕ್ಸೂಚಿ ಭಾಷಣ ಮಾಡುವರು. ವಿಶ್ವಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರೀ, ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಉಪಾಧ್ಯಕ್ಷೆ ಶಿಲ್ಪಾ ಗಣೇಶ್,ಉದ್ಯಮಿ ಸಂತೋಷ್ ಕುಮಾರ್ ರೈ ಕೈಕಾರ ಮತ್ತಿತರರು ಅತಿಥಿಗಳಾಗಿರುರು. ಸಮಾಜ ಸೇವಕ ಕುಂದಾಪುರದ ವಿವೇಕ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು ಎಂದು  ತಿಳಿಸಿದರು.

 ಸಮಿತಿ ಅಧ್ಯಕ್ಷ ಪೂರ್ಣಜಿತ್ ರೈ ಬೆಳ್ಳಿಪ್ಪಾಡಿ, ಕಾರ್ಯದರ್ಶಿ ಧನ್ಯಕುಮಾರ್ ಬೆಳಂದೂರು, ಪುತ್ತೂರು ಪ್ರಖಂಡ ಬಜರಂಗದಳ ಸಂಯೋಜಕ ನಿತಿನ್ ನಿಡ್ಪಳ್ಳಿ  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !