ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಸೇವಾಭಾರತಿಯಿಂದ ಸಂವಾದ

Last Updated 19 ಸೆಪ್ಟೆಂಬರ್ 2022, 6:03 IST
ಅಕ್ಷರ ಗಾತ್ರ

ಮಂಗಳೂರು: ದಿವ್ಯಾಂಗರ ಅಭ್ಯುದಯಕ್ಕಾಗಿ ಸ್ಥಾಪಿತವಾದ ಸೇವಾಭಾರತಿ ಸಂಸ್ಥೆಯ ಸೇವಾ ಪ್ರಕಲ್ಪ ‘ಅನಂತ ಸೌಖ್ಯ‘ ವು ‘ಪೇಜ್‘ ಸಹಯೋಗದಲ್ಲಿ ‘ವಯಸ್ಸು-ಮುಪ್ಪು-ಜೀವನ ವಿಧಾನ‘ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮವನ್ನು ಇಲ್ಲಿಯ ವಿ.ಟಿ.ರಸ್ತೆಯ ಚೇತನಾ ಶಾಲಾ ವಠಾರದಲ್ಲಿ ಹಮ್ಮಿಕೊಂಡಿತ್ತು.

ಮುಖ್ಯ ಅತಿಥಿಯಾಗಿದ್ದ ‘ಪೇಜ್’ ಸಂಸ್ಥೆಯ ಉಪಾಧ್ಯಕ್ಷೆ ಮತ್ತು ಯೆನೆಪೋಯ ವೈದ್ಯಕೀಯ ಕಾಲೇಜಿನ ವೃದ್ಧಾಪ್ಯ ಕಾಯಿಲೆಗಳ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ.ಪ್ರಭಾ ಅಧಿಕಾರಿ, ಮುಪ್ಪಿನಲ್ಲೂ ಹೇಗೆ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು ಮತ್ತು ಸ್ಮರಣಶಕ್ತಿಯನ್ನು ಉಳಿಸಿಕೊಳ್ಳುವ ವಿಧಾನಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ವ್ಯಾಯಾಮಗಳನ್ನು ಹೇಳಿಕೊಟ್ಟರು. ಹಿರಿಯ ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಚೇತನಾ ಶಾಲೆಯ ಶಿಕ್ಷಕಿಯರು ಪ್ರಾರ್ಥಿಸಿದರು. ಸೇವಾಭಾರತಿ ಸಂಸ್ಥೆಯ ಗೌರವ ಕಾರ್ಯದರ್ಶಿ ಎಚ್. ನಾಗರಾಜ ಭಟ್ ಸ್ವಾಗತಿಸಿದರು. ಅನಂತ ಸೌಖ್ಯದ ಸಂಚಾಲಕ ಉಮೇಶ್ ಶೆಣೈ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT