ಈ ಪೈಕಿ ಕಾಸರಗೋಡು ಜಿಲ್ಲೆಯ ಮೂವರು ಹಾಗೂ ಭಟ್ಕಳದ ಯುವಕ ಇದೇ 6 ರಂದು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರು. ಬೆಳ್ತಂಗಡಿ ತಾಲ್ಲೂಕಿನ ಕಲ್ಲೇರಿಯ ಯುವಕ ಇದೇ 10 ರಂದು ಹಾಗೂ ಬಂಟ್ವಾಳ ತಾಲ್ಲೂಕು ಸಜಿಪನಡು ಗ್ರಾಮದ 10 ತಿಂಗಳ ಮಗು ಇದೇ 11 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 26, 34, 39, 40, 41, 56 ಹಾಗೂ 64 ನೇ ರೋಗಿಗಳು ಗುಣಮುಖರಾಗಿದ್ದಾರೆ.