ಮಂಗಳವಾರ, ನವೆಂಬರ್ 12, 2019
28 °C

ಶಿವಳ್ಳಿ ಬಳಗದಿಂದ ದೀಪಾವಳಿ ಸಂಭ್ರಮ

Published:
Updated:
Prajavani

ಬದಿಯಡ್ಕ: ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಮುಳ್ಳೇರಿಯ ಶಿವಳ್ಳಿ ಬ್ರಾಹ್ಮಣ ವಲಯ ಸಮಿತಿಯ ಆಶ್ರಯದಲ್ಲಿ ಭಾನುವಾರ ದಸರಾ ನಾಡಹಬ್ಬ ಹಾಗೂ ದೀಪಾವಳಿ ಸಂಭ್ರಮ-2019ನ್ನು ಆಚರಿಸಲಾಯಿತು. ಸಂಘಟಕ ಬೆಂಗಳೂರಿನ ಡಾ. ಕೆ. ಎನ್. ಅಡೂರು ದೀಪ ಬೆಳಗಿಸಿ ಚಾಲನೆ ನೀಡಿದರು.

ಸಭಾದ ಸದಸ್ಯರಿಂದ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ಅಡೂರಿನ ಶ್ರೀಪ್ರಿಯಾ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಭಜನೆಯಲ್ಲಿ ಸತ್ಯಪ್ರೇಮ ಭಾರಿತ್ತಾಯ, ಚಂಚಲಾ ಸರಳಾಯ, ಜಯಲಕ್ಷ್ಮಿ ತಂತ್ರಿ, ಆಶಾ ಆರ್. ಕೇಕುಣ್ಣಾಯ, ಆಲಂತಡ್ಕ, ರಾಜಿತಾ ಸರಳಾಯ, ಪ್ರತಿಮಾ ಬಾರಿತ್ತಾಯ ಭಾಗವಹಿಸಿದ್ದರು. ಆದ್ಯಂತ್ ಅಡೂರು ತಬಲಾವಾದನದಲ್ಲಿ ಸಹಕರಿಸಿದರು.

ಉತ್ಸವದ ಅಂಗವಾಗಿ ಸಾಕ್ಷಿ ಕೇಕುಣ್ಣಾಯ ಆಲಂತಡ್ಕ ಇವರಿಂದ ಸುಗಮ ಸಂಗೀತ, ಸುಶಾಂತ್ ಮಾಲೆಂಕಿ ಅವರಿಂದ ಯೋಗಾಸನ, ರಾಜಿತಾ ಸರಳಾಯ ಅವರಿಂದ ವಯಲಿನ್ ವಾದನ, ಪ್ರತಿಮಾ ಸರಳಾಯ, ಶ್ಯಾವ್ಯ ವೈ ಇವರಿಂದ ಶಾಸ್ತ್ರೀಯ ಸಂಗೀತ, ಸಂಭ್ರಮ್ ಕುಮಾರ್ ಸರಳಾಯ ಇವರಿಂದ ಭಜನ್, ಆದ್ಯಂತ್ ಅಡೂರು ಅವರಿಂದ ತಬಲಾವಾದನ ನಡೆಯಿತು.

ಪುರಾಣ ರಸಪ್ರಶ್ನೆ ಸ್ಪರ್ಧೆಯಲ್ಲಿ ಶ್ಯಾವ್ಯ ವೈ. ಹಾಗೂ ಆದ್ಯಂತ್ ಅಡೂರು ಪ್ರಥಮ, ಸುಶಾಂತ್ ಮಾಲೆಂಕಿ ದ್ವಿತೀಯ ಹಾಗೂ ಸಂಭ್ರಮ ಸರಳಾಯ ತೃತೀಯ ಬಹುಮಾನ ಪಡೆದರು. ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷೆ ಸತ್ಯಪ್ರೇಮಾ ಭಾರಿತ್ತಾಯ, ವಲಯ ಅಧ್ಯಕ್ಷ ನೂಜಿಬೆಟ್ಟು ವೆಂಕಟಕೃಷ್ಣ ಕಾರಂತ, ಮುಖಂಡರಾದ ಶ್ರೀಪ್ರಸಾದ ಭಾರಿತ್ತಾಯ, ರಾಜಾರಾಮ ಸರಳಾಯ, ಶ್ರೀಪತಿ ಎಂ, ರವಿರಾಜ ಕೇಕುಣ್ಣಾಯ, ಸತ್ಯನಾರಾಯಣ ಮನೊಳಿತ್ತಾಯ, ಸೀತಾರಾಮ ಕುಂಜತ್ತಾಯ, ಪ್ರೀತಿ ಸರಳಾಯ,  ಪ್ರಶಾಂತ ರಾಜ ವಿ. ತಂತ್ರಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)