ಶುಕ್ರವಾರ, ಮೇ 27, 2022
27 °C

ಶ್ರೀನಿವಾಸ್‌ ಕಾಲೇಜು: ವಿದ್ಯಾರ್ಥಿಗಳ ಪ್ರತಿಜ್ಞಾ ಸ್ವೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಶ್ರೀನಿವಾಸ್‌ ವಿಶ್ವವಿದ್ಯಾಲಯದ ಸೋಶಿಯಲ್‌ ಸೈನ್ಸ್‌ ಅಂಡ್‌ ಹ್ಯುಮಾನಿಟಿಸ್‌, ಕಂಪ್ಯೂಟರ್‌ ಸೈನ್ಸ್‌ ಅಂಡ್‌ ಇನ್ಫರ್ಮೇಶನ್‌ ಸೈನ್ಸ್‌, ಏವಿಯೇಶನ್‌ ಸ್ಟಡೀಸ್‌ ಕಾಲೇಜುಗಳ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಓರಿಯೆಂಟೇಶನ್‌ ಕಾರ್ಯಕ್ರಮ ಸೋಮವಾರ  ಪಾಂಡೇಶ್ವರದ ಸಿಟಿ ಕ್ಯಾಂಪಸ್‌ನಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ್‌ ರಾವ್‌  ಮಾತನಾಡಿ, ‘ವಿದ್ಯಾರ್ಥಿಗಳಿಗೆ ನಿಜ ಜೀವನದಲ್ಲಿ  ಹಾಗೂ ಸಾಮಾಜಿಕವಾಗಿ ಬೇಕಾಗಿರುವ ಅಂಶಗಳು ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಅಳವಡಿಸಲಾಗಿದೆ’ ಎಂದರು. ಕುಲಪತಿ ಡಾ. ಪಿ. ಎಸ್‌ ಐತಾಳ್‌, ಶ್ರೀನಿವಾಸ್‌ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳನ್ನು ಮುಂದಿನ ಸಮಾಜಕ್ಕಾಗಿ ರೂಪಿಸುತ್ತಿದೆ ಎಂದರು. ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು.

ಡೀನ್‌ಗಳಾದ ಡಾ. ಲವೀನಾ ಡಿಮೆಲ್ಲೋ, ಪ್ರೊ. ಸುಬ್ರಹ್ಮಣ್ಯ ಭಟ್,  ಪ್ರೊ. ಪವಿತ್ರಾ ಕುಮಾರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು