ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರಳ ಸಾಮೂಹಿಕ ವಿವಾಹ: ಸಪ್ತಪದಿ ತುಳಿದ ನಾಲ್ಕು ಜೋಡಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ
Last Updated 25 ಆಗಸ್ಟ್ 2022, 13:39 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಆದಿ ಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಸಪ್ತಪದಿ ಸರಳ ಸಾಮೂಹಿಕ ವಿವಾಹದಲ್ಲಿ ನಾಲ್ಕು ಜೋಡಿ ದಾಂಪತ್ಯ ಜೀವನಕ್ಕೆ ಕ್ಕೆ ಕಾಲಿಟ್ಟರು.

ಚಿಕ್ಕಮಗಳೂರಿನ ಇಂದಿರಾ ನಗರದ ವಿನೋದ್ ರಾಜ್ ಎಚ್. ಕೆ. ಮತ್ತು ಅಲ್ಲಿನ ಬಾಳೆಹಳ್ಳಿಯ ಶ್ವೇತಾ ಕೆ. ಎಸ್., ಮಂಡ್ಯದ ಕೆ. ಆರ್ ಪೇಟೆಯ ಎಂ.ಆರ್ ದೇವರಾಜು ಮತ್ತು ಶಿವಮೊಗ್ಗದ ಮತ್ತಿಘಟ್ಟ ಗ್ರಾಮದ ತಾರಾ ಎನ್, ಪುತ್ತೂರು ಶಾಂತಿಗೋಡು ಗ್ರಾಮದ ಮುಂಡೋಡಿ ಮನೆ ನಿಶಾಂತ್ ಎಂ. ಮತ್ತು ಅದೇ ಗ್ರಾಮದ ಶ್ವೇತಾ ಎಂ, ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕು ನಾರಾಯಣಪುರ ಗ್ರಾಮದ ತೇಜ ಎನ್.ಎಸ್ ಮತ್ತು ಅದೇ ಗ್ರಾಮದ ರೂಪ ಜೋಡಿಯಾದರು.

ಧಾರ್ಮಿಕ ದತ್ತಿ ಇಲಾಖೆಯ ಮೂಲಕ ದೇವಳದಿಂದ ₹5 ಸಾವಿರ ಹಾಗೂ ವಧುವಿಗೆ ₹10 ಸಾವಿರ, ಸುಮಾರು ₹40 ಸಾವಿರ ಮೌಲ್ಯ ಚಿನ್ನದ ತಾಳಿ, ಎರಡು ಚಿನ್ನದ ಗುಂಡನ್ನು ನೀಡಲಾಯಿತು.ಊಟೋಪಚಾರ ಹಾಗೂ ಆವಶ್ಯಕ ವ್ಯವಸ್ಥೆಗಳನ್ನು ದೇವಳದಿಂದ ಮಾಡಲಾಯಿತು.

ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಶಿಷ್ಟಾಚಾರ ಅಧಿಕಾರಿ ಜಯರಾಮ ರಾವ್, ಶಿವಸುಬ್ರಹ್ಮಣ್ಯ ಭಟ್, ನಾಗೇಶ್ ಎ.ವಿ, ನವೀನ್, ಮಹೇಶ್, ಮಹಾಬಲೇಶ್ವರ ದೋಳ, ಮೋಹನ್ ಎಂ.ಕೆ, ರಾಜಲಕ್ಷ್ಮಿ ಶೆಟ್ಟಿಗಾರ್, ಯೋಗೀಶ್ ಎಂ. ವಿಟ್ಲ, ಎನ್. ಸಿ. ಸುಬ್ಬಪ್ಪ, ಅಶೋಕ್ ಅತ್ಯಡ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT