ಹೊಸಮಠ ಸೇತುವೆ ಮುಳುಗಡೆ: ಸಂಚಾರ ಅಸ್ತವ್ಯಸ್ತ

7

ಹೊಸಮಠ ಸೇತುವೆ ಮುಳುಗಡೆ: ಸಂಚಾರ ಅಸ್ತವ್ಯಸ್ತ

Published:
Updated:
Deccan Herald

ಕಡಬ(ಉಪ್ಪಿನಂಗಡಿ): ಘಟ್ಟದ ಮೇಲೆ ಮತ್ತು ಕಡಬ ಪ್ರದೇಶದಲ್ಲಿ ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯಲ್ಲಿರುವ ಹೊಸಮಠ ಸೇತುವೆ  ಸೋಮವಾರ ಮುಳುಗಡೆಯಾಗಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.

 ಅಪೂರ್ಣ ಸ್ಥಿತಿಯಲ್ಲಿರುವ ನೂತನ ಸೇತುವೆಯಲ್ಲಿ ಜನರು ಕಾಲ್ನಡಿಗೆಯಲ್ಲಿ ತೆರಳಿ ವಾಹನಗಳನ್ನು ಆಶ್ರಯಿಸುತ್ತಿದ್ದಾರೆ. ಬೈಕ್ ಸವಾರರು ನೂತನ ಸೇತುವೆಯ ಮೇಲೆ ಹರಸಾಹಸದಿಂದ ತಮ್ಮ ಬೈಕ್ ದಾಟಿಸುತ್ತಿರುವುದು ಸಾಮಾನ್ಯವಾಗಿತ್ತು. ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳುವ ಯಾತ್ರಾರ್ಥಿಗಳು ಪರದಾಡುವಂತಾಯಿತು. ಸುಬ್ರಹ್ಮಣ್ಯ ಯಾತ್ರಾರ್ಥಿಗಳು ಮತ್ತು ಸ್ಥಳೀಯ ಕೆಲವು ವಾಹನಗಳವರು ಸುಬ್ರಹಣ್ಯ, ಕಡಬ, ಉಪ್ಪಿನಂಗಡಿ ಪ್ರದೇಶಗಳಿಗೆ ತೆರಳಿ ಸುತ್ತು ಬಳಸಿಕೊಂಡು ಯಾನ ಮುಂದುವರಿಸಿದರು.

ಕಡಬ-ಪಂಜ ರಸ್ತೆಯೂ ಬಂದ್: ಘಾಟಿ ತಪ್ಪಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಡಬ-ಪಂಜ ರಸ್ತೆಯ ಪುಳಿಕುಕ್ಕು ಎಂಬಲ್ಲಿ ಕುಮಾರಧಾರ ನದಿಯ ನೆರೆ ನೀರು ರಸ್ತೆಗೆ ನುಗ್ಗಿದ್ದು  ಇಲ್ಲಿಯೂ ರಸ್ತೆ ಸಂಚಾರ ಅಸ್ಥವ್ಯಸ್ಥಗೊಂಡಿರುವುದು ಕಂಡು ಬಂದಿದೆ.

ಅಪಾರ ಕೃಷಿ ಹಾನಿ: ಕಡಬ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ರಾತ್ರಿಯಿಂದಲೇ ಭಾರೀ ಮಳೆಯಾಗುತ್ತಿದ್ದು, ಕಡಬ ಸೇರಿದಂತೆ ಆಲಂಕಾರು, ಕೊಯಿಲ, ಪೆರಾಬೆ, ಕೊಂಬಾರು, ಬಿಳಿನೆಲೆ, ನೂಜಿಬಾಳ್ತಿಲ, ರಾಮಕುಂಜ ಮೊದಲಾದ ಗ್ರಾಮಾಂತರ ಪ್ರದೇಶದಲ್ಲಿ ಹರಿಯುವ ನದಿ, ತೊರೆ, ಕೆರೆಗಳು ತುಂಬಿಕೊಂಡು ಹರಿಯಲಶರಂಭಿಸಿದೆ.

ಕುಮಾರಧಾರ, ಗುಂಡ್ಯ ಹೊಳೆಯಲ್ಲಿ ಹರಿವು ಹೆಚ್ಚಾಗಿ ನದಿ ಪಾತ್ರದ ಕೃಷಿ ತೋಟಗಳಿಗೆ ನೆರೆ ನೀರು ನುಗ್ಗಿದೆ. ಕೊಂಬಾರು ಪೇಟೆಯಲ್ಲಿ ಹಳೆ ಕಟ್ಟಡವೊಂದು ಕುಸಿದು ಬಿದ್ದಿದೆ. ಕಟ್ಟಡದ ಪಕ್ಕದ ಕಟ್ಟಡಗಳಿಗೂ ಹಾನಿಯಾಗುವ ಸಂಭವಿದ್ದು, ಸ್ಥಳಿಯರು ದುರಸ್ತಿಗೊಳಿಸಿ ಸಂಭವನೀಯ ಅಪಾಯವನ್ನು ತಪ್ಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !