ನೀರಕಟ್ಟೆ: ಕೊಚ್ಚಿಹೋದ ಕಿರು ಸೇತುವೆ

7
ಚತುಷ್ಪಥ ಕಾಮಗಾರಿ ಅವೈಜ್ಞಾನಿಕ ಕಳಪೆ– ದೂರು

ನೀರಕಟ್ಟೆ: ಕೊಚ್ಚಿಹೋದ ಕಿರು ಸೇತುವೆ

Published:
Updated:
ಉಪ್ಪಿನಂಗಡಿ ಸಮೀಪ ನೀರಕಟ್ಟೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಸಲುವಾಗಿ ತೋಡುನಲ್ಲಿ ನಿರ್ಮಾಣ ಹಂತದಲ್ಲಿದ್ದ ಕಿರು ಸೇತುವೆ ಕೊಚ್ಚಿ ಹೋಗಿದೆ.

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆಯುತ್ತಿರುವ ಚತುಷ್ಪಥ ಕಾಮಗಾರಿಯಲ್ಲಿ, ನೀರಕಟ್ಟೆ ಎಂಬಲ್ಲಿ ತೋಡಿಗೆ ನಿರ್ಮಿಸಿರುವ ಕಿರು ಸೇತುವೆ (ಸ್ಲಾಬ್ ಮೋರಿ)ಭಾರೀ ಮಳೆ, ನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗಿದೆ.

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಹೆದ್ದಾರಿ ಬದಿಯಲ್ಲಿಯೇ ಗೋಳಿತೊಟ್ಟು, ಸಣ್ಣಂಪಾಡಿ, ನೀರಕಟ್ಟೆ ಕಡೆಯಿಂದ ಹರಿದು ಬರುವ ತೋಡನ್ನು ತಿರುಗಿಸುವ ನಿಟ್ಟಿನಲ್ಲಿ ನೀರಕಟ್ಟೆ  ಟಪ್ಪಾಲುಕೊಟ್ಟಿಗೆ ಎಂಬಲ್ಲಿ ತೋಡಿನ ಬದಿಗೆ ಮಣ್ಣು ಹಾಕಿ ತಡೆಯಲಾಗಿತ್ತು. ಇಲ್ಲಿ ಸೇತುವೆ, ಕಿರು ಸೇತುವೆ ಕಾಮಗಾರಿ ಪ್ರಗತಿಯಲ್ಲಿರುವಾಗಲೇ ನೀರಿನ ಪ್ರವಾಹಕ್ಕೆ ಒಡೆದು ಕೊಚ್ಚಿ ಹೋಗಿದೆ.

ಕಳಪೆ ಕಾಮಗಾರಿ ಆರೋಪ: ‘ಸೇತುವೆ  ತೀರಾ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ, ತೋಡಿನ ಮೇಲೆ ಮಣ್ಣು ಹಾಕಿ ಬಳಿಕ ಸೇತುವೆ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ತೆಳ್ಳಗಿನ ಕಂಬಿ ಬಳಸಲಾಗಿದೆ ಎಂಬ ದೂರುಗಳು ವ್ಯಕ್ತವಾಗಿತ್ತು. ಜಿಲ್ಲಾಧಿಕಾರಿ ಗಮನಕ್ಕೂ ತರಲಾಗಿತ್ತು’ ಎಂದು ಹೇಳಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಎಲ್ ಅಂಡ್‌ ಟಿ. ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !